ಸುರತ್ಕಲ್ ಯಕ್ಷಮಿತ್ರ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಕೆ ರಾಜೇಶ್ ಕುಮಾರ್ ಆಯ್ಕೆ

ಸುರತ್ಕಲ್: ಸುರತ್ಕಲ್ ಯಕ್ಷಮಿತ್ರ ಸಂಸ್ಥೆಯ ವಾರ್ಷಿಕ ಮಹಾಸಭೆಯು ಸಂಸ್ಥೆಯ ಅಧ್ಯಕ್ಷ ಜಗದೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ 2025-26 ಸಾಲಿನ ನೂತನ ಪದಾಧಿಕಾರಿಗಳನ್ನು ಏಕಾಭಿಪ್ರಾಯದಿಂದ ಆಯ್ಕೆ ಮಾಡಲಾಯಿತು.

ಮಹಾಬಲ ಪೂಜಾರಿ ಕಡಂಬೋಡಿ ಅವರನ್ನು ಗೌರವಾಧ್ಯಕ್ಷರಾಗಿ , ಕೆ. ರಾಜೇಶ್ ಕುಮಾರ್ ಅವರನ್ನು ಅಧ್ಯಕ್ಷರಾಗಿಯೂ, ನಾಗರಾಜ್ ಕಡಂಬೋಡಿ ಅವರನ್ನು ಕಾರ್ಯದರ್ಶಿಯಾಗಿಯೂ, ಜಗದೀಪ್ ಶೆಟ್ಟಿ ಅವರನ್ನು ಕೋಶಾಧಿಕಾರಿಯಾಗಿಯೂ ಆಯ್ಕೆ ಮಾಡಲಾಯಿತು.

ಪದ್ಮನಾಭ ಕಟೀಲು ದುಬಾಯಿ, ಭಾಸ್ಕರ ಅಗರಮೇಲು, ಹರಿಶೇಖರ ಸೆರ್ಕಳ, ಅನಿಲ್ ಎಸ್. ಕರ್ಕೆರ, ಸಂತೋಷ್ ಬೇಕಲ್, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ರಫೀಕ್ ಕಡಂಬೋಡಿ,, ಹರೀಶ್ ಆಚಾರ್ಯ, ರವಿಕಿರಣ್ ಆಚಾರ್ಯ, ಸತೀಶ್ ಶೆಟ್ಟಿ ಬಾಳಿಕೆ, ಅನಂತರಾಜ್ ಶೆಟ್ಟಿಗಾರ್, ಭಾಸ್ಕರ್ ಅಮೀನ್ ಕೃಷ್ಣಾಪುರ, ಶಿವಪ್ರಸಾದ್ ಕೃಷ್ಣಾಪುರ, ಅಕ್ಷತ್ ಕೃಷ್ಣಾಪುರ ಅವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ರವಿ ಶೆಟ್ಟಿ ಅಗರಮೇಲು, ವಾಸುದೇವ ಆಚಾರ್ಯ ಕುಳಾಯಿ, ಮಹೇಶ್ ಮೂರ್ತಿ ಸುರತ್ಕಲ್, ಪ್ರೇಮ್ ಶೆಟ್ಟಿ ಮುಂಬಯಿ ಅವರನ್ನು ಸಂಸ್ಥೆಯ ಗೌರವ ಸಲಹೆಗಾರರಾಗಿ ನೇಮಿಸಲಾಗಿದೆ.

error: Content is protected !!