ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್, ಮಾಜಿ ಅಧ್ಯಕ್ಷ ಕೇಶವ ಗೌಡರನ್ನು ವಿಚಾರಣೆ ನಡೆಸಿದ ಎಸ್.ಐ.ಟಿ

ಬೆಳ್ತಂಗಡಿ: ಮಾಧ್ಯಮಗಳಲ್ಲಿ ನೀಡಿದ ಹೇಳಿಕೆಗಳ ವಿಚಾರವಾಗಿ ಧರ್ಮಸ್ಥಳ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಗೌಡ ಹಾಗೂ ಹಾಲಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಅವರಿಗೆ ಎಸ್.ಐ.ಟಿ ನೋಟೀಸ್ ನೀಡಿ ವಿಚಾರಣೆಗೆ ಕರೆಸಿಕೊಂಡಿದೆ.

ಇಂದು(ಸೆ.19) ಬೆಳಗ್ಗೆ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಹಾಗೂ ಮಾಜಿ ಅಧ್ಯಕ್ಷ ಕೇಶವ ಗೌಡ ಬೆಳಾಲು ಅವರು ವಿಚಾರಣೆಗೆ ಹಾಜರಾಗಿದ್ದು ಮಧ್ಯಾಹ್ನದ ವೇಳೆಗೆ ಇವರಿಬ್ನರೂ ವಿಚಾರಣೆ ಮುಗಿಸಿ ಹಿಂತಿರುಗಿದ್ದಾರೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಕೇಶವ ಗೌಡ ಹಾಗೂ ಶ್ರೀನಿವಾಸ ರಾವ್ ಅವರು ಹಲವು ಬಾರಿ ಮಾದ್ಯಮಗಳಿಗೆ ಹೇಳಿಕೆ ನೀಡಿ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅನಾಥ ಶವಗಳು ಸಿಕ್ಕಿದ್ದು ಅದರ ಎಲ್ಲ ದಾಖಲೆಗಳು ಗ್ರಾಮಪಂಚಾಯತಿನಲ್ಲಿದೆ ಎಂದು ಹೇಳಿಕೆ ನೀಡಿದ್ದರು. ಅದೇ ರೀತಿ ಕೇಶವ ಗೌಡ ಸ್ಮಶಾನಾ ನಿರ್ಮಿಸುವ ಮೊದಲು ಬಂಗ್ಲೆಗುಡ್ಡ ಪರಿಸರಸಲ್ಲಿ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದರು.

ಈ ಎಲ್ಲ ಹಿನ್ನಲೆಯಲ್ಲಿ ಇವರಿಬ್ಬರಿಗೂ ನೊಟೀಸ್ ನೀಡಿ ವಿಚಾರಣೆಗೆ ಕರೆಸಲಾಗಿದೆ.

error: Content is protected !!