ಗಂಟಲಲ್ಲಿ ಚೂಯಿಂಗ್ ಗಮ್ ಸಿಲುಕಿ ಉಸಿರುಗಟ್ಟುತ್ತಿದ್ದ ಬಾಲಕಿ : ಪ್ರಾಣಾಪಾಯದಿಂದ ಪಾರು

ಕೇರಳ: ಕೇರಳದಲ್ಲಿ ಚೂಯಿಂಗ್ ಗಮ್ ಗಂಟಲಲ್ಲಿ ಸಿಕ್ಕಿಕೊಂಡು ಉಸಿರುಗಟ್ಟುತ್ತಿದ್ದ ಬಾಲಕಿಯನ್ನು ಕೆಲ ಯುವಕರು ಸಮಯಕ್ಕೆ ಸರಿಯಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳದಲ್ಲಿದ್ದ ಮೂರುನಾಲ್ಕು ಯುವಕರು ಗುಂಪಿನಲ್ಲಿ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದರು. ಇದೇ ವೇಳೆ ಸೈಕಲ್‌ನಲ್ಲಿ ಬರುತ್ತಿದ್ದ ಬಾಲಕಿ ಚೂಯಿಂಗ್ ಗಮ್ ಚೀಪುತ್ತಾ ಹೋಗುತ್ತಿದ್ದು, ಏಕಾಏಕಿ ಅದು ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಆಕೆ ಉಸಿರುಗಟ್ಟುವ ಸ್ಥಿತಿಗೆ ತಲುಪಿದಳು. ತಕ್ಷಣವೇ ಆತಂಕದಿಂದ ಸಹಾಯಕ್ಕೆ ಕೂಗಿದ ಬಾಲಕಿಗೆ ಯುವಕರು ಬೆಂಬಲ ನೀಡಿ ಸಹಾಯಕ್ಕೆ ಧಾವಿಸಿದ್ದಾರೆ.

ಅವರು ತಕ್ಷಣ ಆಕೆಯ ಬಾಯಿಗೆ ಕೈ ಹಾಕಿ ಚೂಯಿಂಗ್ ಗಮ್‌ ಅನ್ನು ಹೊರತೆಗೆದು ಆಕೆಯ ಉಸಿರಾಡಲು ಸಹಾಯ ಮಾಡಿದರು. ಯುವಕರ ಚಾಣಾಕ್ಷತೆ ಮತ್ತು ಮಾನವೀಯತೆ ಪ್ರಾಣವನ್ನೇ ಉಳಿಸಿದಂತಾಗಿದೆ. ಇದೀಗ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

error: Content is protected !!