ದೋಹಾ, ಕತಾರ್ – MCC Monthi Fest 2025

ಮಂಗಳೂರು: ಸಮುದಾಯದ ಪ್ರಮುಖ ಹಬ್ಬವಾದ ಮರಿಯಮ್ಮನ ಜನ್ಮೋತ್ಸವವನ್ನು ಮಂಗಳೂರು ಕ್ರಿಕೆಟ್ ಕ್ಲಬ್ (MCC) ದೋಹಾ ಸೆಪ್ಟೆಂಬರ್ 12, 2025 ರಂದು DPS Monarch ಶಾಲಾ ಸಭಾಂಗಣದಲ್ಲಿ ಭಕ್ತಿಯಿಂದ ಹಾಗೂ ಸಡಗರದಿಂದ ಆಚರಿಸಲಾಯಿತು.

ಕಾರ್ಯಕ್ರಮವು ಹೊಸ ಕೊಂಬಿನ ಆಶೀರ್ವಾದದಿಂದ ಪ್ರಾರಂಭವಾಗಿ, ಅನ್ನದ ಹಂಚಿಕೆಯಿಂದ ಕುಟುಂಬ–ಸಮರಸ್ಯವನ್ನು ಪ್ರತಿಬಿಂಬಿಸಿತು. ಮಕ್ಕಳ ಭಕ್ತಿಗೀತೆ, ನೃತ್ಯ, ಹಾಸ್ಯನಾಟಕ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನ ಗೆದ್ದವು.

ಅತಿಥಿಗಳಾಗಿ ಡಾ. ಲವಿನಾ ನೋರೋನ್ಹ (Ave Palliative Care) MCC ವತಿಯಿಂದ ಅವರನ್ನು ಗೌರವಿಸಲಾಯಿತು.
ಇದೆ ವೇಳೆ ಫಾ. ಮನೋಹರ್ ಡಿಸೋಜಾ ಹಾಗು ಸಂಸ್ಥಾಪಕ ಸದಸ್ಯ ಹಾಗೂ ಉದ್ಯಮಿ ಜೆರಾಲ್ಡ್ ಡಿ’ಮೆಲ್ಲೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. MCC ಅಧ್ಯಕ್ಷ ಡೆನ್ಸಿಲ್ ಕ್ರಿಸ್ಟಿನ್ ಲೊಬೊ ಹಾಗೂ ತಂಡ ಪ್ರಾಯೋಜಕರು, ಸ್ವಯಂಸೇವಕರು ಮತ್ತ ಶಿಕ್ಷಕರ ಸೇವೆಯನ್ನು ಕೊಂಡಾಡಿದರು.

error: Content is protected !!