ಪಡ್ರೆ ಶ್ರೀ ಧೂಮಾವತಿ ದೈವಸ್ಥಾನ ದ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಸುರತ್ಕಲ್: ಇತಿಹಾಸ ಪ್ರಸಿದ್ಧ ಸುರತ್ಕಲ್ ಪಡ್ರೆ ಶ್ರೀ ಧೂಮಾವತಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ದೈವಸ್ಥಾನದ ವಠಾರದಲ್ಲಿ ದೈವಸ್ಥಾನದ ಗಡಿ ಪ್ರಧಾನರಾದ ಬಾಬು ಭಂಡ್ರಿಯಲ್ ಬಿಡುಗಡೆಗೊಳಿಸಿದರು.

ದೈವಸ್ಥಾನ ದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಲೋಕಯ್ಯ ಶೆಟ್ಟಿ ಮುಂಚೂರು, ಸತೀಶ್ ಮುಂಚೂರು, ಪ್ರಧಾನ ಕಾರ್ಯದರ್ಶಿ ಲತೀಶ್ ಶೆಟ್ಟಿ ಪಡ್ರೆ, ಸಹ ಕಾರ್ಯದರ್ಶಿ ಮುಖೇಶ್ ಶೆಟ್ಟಿ ಪಡ್ರೆ, ಯತೀಶ್ ಪಡ್ರೆ, ದಿವಾಕರ್ ಶೆಟ್ಟಿ ಪಡ್ರೆ, ಭಂಟ ಪೂಜಾರಿ ಮುಕ್ಕ ಉಪಸ್ಥಿತರಿದ್ದರು.

ತಾ.02.03.2026 ರಂದು ಪಡ್ರೆ ಶ್ರೀ ಧೂಮಾವತಿ ಭಂಟ ದೈವ ಗಳ ಭಂಡಾರ ಮುಕ್ಕ ಭಂಡಾರ ಮನೆಯಿಂದ ಹೊರಟು ಪಡ್ರೆ ಶ್ರೀ ಧೂಮಾವತಿ ದೈವಸ್ಥಾನದಳ್ಳಿ “ಧ್ವಜಾರೋಹಣ” ಮತ್ತು “ದೀಪಾರಾಧನೆ ಬಲಿ” ನಡೆಯಲಿದೆ. ತಾ.03.03.2026ರಂದು ಮಧ್ಯಾಹ್ನ “ಸಾರ್ವಜನಿಕ ಅನ್ನ ಸಂತರ್ಪಣೆ. ಯು. “ಶ್ರೀಧರ್ ಕೆ. ಅಮೀನ್. ಮಂಗಳೂರು ಇವರ ಸ್ಮರಣಾರ್ಥ ನಡೆಯಲಿದೆ.

ಅದೇ ದಿನ ರಾತ್ರಿ ಹೂವಿನ ಪೂಜೆ ಹಾಗೂ ಕಾಲಾವಧಿ ಜಾತ್ರೆ ನಡೆಯಲಿದೆ. ತಾ.04.03.2026 ರಂದು ಸಂಜೆ ಬಾಕಿ ಮಾರು ಚೆಂಡು, ದೀಪಾರಾಧನೆ ಬಲಿ, ಧ್ವಜಾವರೋಹಣ ಭಂಡಾರ ನಿರ್ಗಮನ ನಡೆಯಲಿದ್ದ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

error: Content is protected !!