MRPLನಲ್ಲಿ ಕಾರ್ಮಿಕರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಭಿನಂದನೆ ಕಾರ್ಯಕ್ರಮ

ಮಂಗಳೂರು: ಎಂ.ಆರ್.ಪಿ.ಎಲ್ ಒ.ಎನ್ ಜಿ.ಸಿ ಕರ್ಮಚಾರಿ ಸಂಘದ ವತಿಯಿಂದ ಮಂಗಪೇಟೆ ಶಾರದ ಭಜನಾ ಮಂಡಳಿಯಲ್ಲಿ ಜರಗಿದ ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕಾರ್ಮಿಕರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಅಭಿನಂದನೆ ಕಾರ್ಯಕ್ರಮ ಹಾಗೂ ಕಾರ್ಮಿಕರ ನಿವೃತ್ತಿ ವೇತನ ನೀಡುವ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಎಂ.ಆರ್.ಪಿ.ಎಲ್ ಸಿ.ಎಸ್ ಅರ್ ವಿಭಾಗದ ಸಿ.ಜಿ.ಎಂ ಪ್ರಶಾಂತ್ ಬಾಳಿಗಾ ಅವರು ಇಂದಿನ ವಿದ್ಯಾರ್ಥಿಗಳು ದೇಶದ ಭವಿಷ್ಯ ರೂಪಿಸುವವ ರಾಗಿದ್ದಾರೆ ಕಷ್ಟ ಪರಿಶ್ರಮ ಪಟ್ಟರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಒತ್ತಿ ಹೇಳಿದರು. “ಕಷ್ಟ ಪರಿಶ್ರಮ ಪಟ್ಟರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಸರ್ಕಾರಿ ಶಾಲೆ ಎಂಬ ಕೀಳರಿಮೆ ಬೇಡ. ಅಲ್ಲಿ ಕಲಿತ ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡಿದ್ದಾರೆ. ತಂದೆ-ತಾಯಿಗಳನ್ನು ಗೌರವಿಸುವ, ಉತ್ತಮ ಸಂಸ್ಕಾರ ಬೆಳೆಸುವ ಗುಣಗಳನ್ನು ವಿದ್ಯಾರ್ಥಿಗಳು ಕಲಿಯಬೇಕು” ಎಂದರು. ಕಾರ್ಮಿಕರ ಸಮಸ್ಯೆಗಳು ಶೀಘ್ರವಾಗಿ ಪರಿಹಾರವಾಗಲೆಂದೂ ಅವರು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಆರ್.ಪಿ.ಎಲ್ ಮ್ಯಾನೇಜ್ಮೆಂಟ್ ಸ್ಟಾಪ್ ಅಸೋಸಿಯೇಷನ್ ಅಧ್ಯಕ್ಷ ಸಂಪತ್ ರೈ ವಹಿಸಿದ್ದರು.

ವೇದಿಕೆಯಲ್ಲಿ ಎಂ.ಆರ್.ಪಿ.ಎಲ್ ಎಡ್ಮಿನ್ ವಿಭಾಗದ ಜಿ.ಎಂ ಸತೀಶ್,ಇನ್ಸುಮೆಂಟ್ ಜಿ.ಎಂ ಗೋಪಿನಾಥ್, ಎಂ.ಆರ್.ಪಿ.ಎಲ್ ಮ್ಯಾನೇಜ್ಮೆಂಟ್ ಸ್ಟಾಪ್ ಅಸೋಸಿಯೇಷನ್ ಉಪಾಧ್ಯಕ್ಷ ದಯಾನಂದ ಪ್ರಭು, ಎಂ.ಆರ್.ಪಿ.ಎಲ್ ಎಂಪ್ಲಾಯಿಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸಾಯಿಪೃಥ್ವಿ, ಕೋಶಾಧಿಕಾರಿ ರೋಶನ್, ಉದ್ಯಮಿ ಪ್ರಶಾಂತ್ ಮುಡಾಯಿಕೊಡಿ, ಕರ್ಮಚಾರಿ ಸಂಘದ ಎಸ್ ಸಿ ವಿಭಾಗದ ಅಧ್ಯಕ್ಷ ಸಂತೋಷ್, ಸಂಘದ ಉಪಾಧ್ಯಕ್ಷ ಸುರೇಶ್ ಪೊಸ್ರಾಲ್, ಜತೆ ಕಾರ್ಯದರ್ಶಿ ಸುನೀಲ್ ಬೋಳ, ಸುರೇಶ್ ಪೂಜಾರಿ ಕೃಷ್ಣಾಪುರ, ಕೋಶಾಧಿಕಾರಿ ಪುರುಷೋತ್ತಮ, ಮುಂತಾದವರು ಉಪಸ್ಥಿತರಿದ್ದರು.

ಕರ್ಮಚಾರಿ ಸಂಘದ ಅಧ್ಯಕ್ಷ ಪ್ರಸಾದ್ ಅಂಚನ್ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಭಟ್ ಧನ್ಯವಾದ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ 23 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಅಭಿನಂದಿಸಲಾಯಿತು ನಿವೃತ್ತಿ ಹೊಂದಿದ 6 ಕೂಲಿ ಕಾರ್ಮಿಕರನ್ನು ಸನ್ಮಾನಿಸಲಾಯಿತು ಎಂ.ಆರ್.ಪಿ.ಎಲ್ ಎಂಪ್ಲಾಯಿಸ್ ಯೂನಿಯನ್ ವತಿಯಿಂದ ಮೃತರಾದ ಕಾರ್ಮಿಕರಿಗೆ ಸಹಾಯಧನ ವಿತರಿಸಲಾಯಿತು.

error: Content is protected !!