ಮಂಗಳೂರು: ಧ್ವನಿ ಬೆಳಕು ಮಾಲಕರ ಸಂಘ, ಮಂಗಳೂರು ತಾಲೂಕು (ರಿ)ಯ ಕಾವೂರು ವಲಯದ ಆಶ್ರಯದಲ್ಲಿ ತೃತೀಯ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ ‘ಸಂಭ್ರಮ್ 2025’ ನಡೆಯಿತು. ಶನಿವಾರ(ಸೆ.13) ಸಂಜೆ 7 ಗಂಟೆಗೆ ಕಾವೂರು ಕೇಂದ್ರ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮವನ್ನು ಮೂಡಬಿದ್ರಿ ಶಾಸಕ ಉಮನಾಥ್ ಕೋಟ್ಯಾನ್ ಅವರು ಉದ್ಘಾಟಿಸಿದರು. ಧ್ವನಿ ಬೆಳಕು ಮಾಲಕರ ಸಮಸ್ಯೆಗಳು ಮತ್ತು ಅವರ ಜೀವನದ ಕಷ್ಟಗಳನ್ನು ಹಂಚಿಕೊಂಡ ಅವರು, ಸಂಘಟನೆಯ ಒಗ್ಗಟ್ಟು ಮತ್ತು ಸಮಸ್ಯೆಗಳ ಪರಿಹಾರದಲ್ಲಿ ಅದರ ಪಾತ್ರವನ್ನು ಶ್ಲಾಘಿಸಿದರು.
ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ವೈ. ಭರತ್ ಶೆಟ್ಟಿ ಅವರು ನಿಮ್ಮ ಸಮಸ್ಯೆಯನ್ನು ಸದನದಲ್ಲಿ ನಾವು ಧ್ವನಿಯೆತ್ತಿದ್ದೇವೆ, ನಿಮ್ಮ ಜೊತೆ ಯಾವಾಗಲೂ ನಾವು ಇರುತ್ತೇವೆ ಎಂದರು. ಧ್ವನಿ ಬೆಳಕು ಮಾಲಕರ ಸಂಘದ ಅಧ್ಯಕ್ಷರಾದ ಬೆನಟ್ ಡಿ ಸಿಲ್ವ ಮಾತನಾಡಿ ಕಾರ್ಯಕ್ರಮಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಶ್ರೀ ಲೊಯ್ ನೋರೋನೋ ಮಾಲಕರು ಸಿಂಪೋನಿ, ಮೂಸಬ್ಬ ಮಾಲಕರು ಸುಪ್ರೀಂ ಲೈಟ್ಸ್, ಶ್ರೀ ಕಿಶೋರ್ ಸುವರ್ಣ ಮೊಸರು ಕುಡಿಕೆ ಸಮಿತಿ ದಾನದತ್ತಿ ಪ್ರತಿಷ್ಠಾನ, ಸುಮಂತ್ ರಾವ್ ಕಾವೂರ್, ಲೋಕೇಶ್ ಭಂಡಾರಿ ಕಾವೂರು,ಚಂದ್ರಹಾಸ ಕೈಕಂಬ, ಜಗದೀಶ್ ಭಟ್, ಮಾಲಕರು F T R ಮ್ಯೂಸಿಕ್ ಸಿಸ್ಟಮ್,ಸುಕುಮಾರ್, ಸಂದೀಪ್ ಪೂಜಾರಿ, ನಿತ್ಯಾನಂದ ಮಂಗಳೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಪ್ರಿಯಾಹರೀಶ್ ನಿರೂಪಿಸಿ, ವಿಶ್ವನಾಥ ದೇವಾಡಿಗ ಸ್ವಾಗತಿಸಿ, ದಾಮೋದರ್ ಭಾಗವತ್, ಧನ್ಯವಾದವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಸುನೀತಾ, ಅಶ್ವಥ್ ಮತ್ತು ತಂಡದವರ ಸಂಗೀತ ರಸಮಂಜರಿ ಮತ್ತು ಚಾ-ಪರ್ಕ ಕಲಾವಿದರಿಂದ ‘ಎನ್ನನೇ ಕಥೆ’ ನಾಟಕವನ್ನು ಎಂಬ ನಾಟ ಕಲಾಭಿಮಾನಿಗಳೊಂದಿಗೆ ಯಶಸ್ವಿಯಾಗಿ ನಡೆಯಿತು.