ಮೂಡಬಿದ್ರೆ: ಮದ್ದೂರು ಗಣೇಶೋತ್ಸವ ಗಲಭೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರ ಬಳಸಿ ಅವಹೇಳನಕಾರಿ ಬರಹ ಪ್ರಕಟಿಸಿದ್ದ ಆರೋಪದಲ್ಲಿ ಬಂಧನಕ್ಕೊಳಗಾದ ಮಹೇಶ್ ವಿಕ್ರಮ್ ಹೆಗ್ಡೆಯವರ ಜಾಮೀನು ಅರ್ಜಿ ವಿಚಾರಣೆ ಸೋಮವಾರ ಮೂಡಬಿದ್ರೆ ನ್ಯಾಯಾಲಯದಲ್ಲಿ ನಡೆಯಲಿದೆ.
ವಿಕ್ರಮ್ ಹೆಗ್ಡೆ ಪರವಾಗಿ ವಕೀಲ ಶರತ್ ಶೆಟ್ಟಿ ವಾದಿಸಲಿದ್ದಾರೆ.
ಸಾಮೂಹಿಕ ಪ್ರಾರ್ಥನೆ
ಬಂಧನ ವಿರೋಧಿಸಿ ರವಿವಾರ ಸಂಜೆ ಮೂಡುಬಿದಿರೆಯ ಹನುಮಂತ ದೇವಸ್ಥಾನದಲ್ಲಿ ಹಿಂದೂ ಸಮಾಜದ ಪ್ರಮುಖರು ಸೇರಿ ಸಾಮೂಹಿಕ ಪ್ರಾರ್ಥನೆ ನಡೆಸಿದರು. ಈ ವೇಳೆ ರಾಮ ತಾರಕ ಮಂತ್ರ ಹಾಗೂ ಹನುಮಾನ್ ಚಾಲೀಸಾ ಪಠನ ನೆರವೇರಿಸಲಾಯಿತು. ನೂರಾರು ಮಂದಿ ಅಭಿಮಾನಿಗಳು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಹಿಂದು ಪ್ರಮುಖರಾದ ಜಗದೀಶ್ ಅಧಿಕಾರಿ, ಸುದರ್ಶನ್ ಎಂ., ನಾಗರಾಜ ಪೂಜಾರಿ ಒಂಟಿಕಟ್ಟೆ, ಪ್ರಸಾದ್ ಕುಮಾರ್, ವಸಂತ ಗಿಳಿಯಾರ್, ವಿನಯ್ ಕುಮಾರ್,ರಮಿತ ಶೈಲೇಂದ್ರ ಕಾರ್ಕಳ, ಅಶ್ವತ್ಥ ಪಣಪಿಲ, ಪ್ರದೀಪ್ ಸರಿಪಳ್ಳ, ಅಭಿಲಾಷ್ ಅರ್ಜುನಾಪುರ, ಗೋಪಾಲ ಶೆಟ್ಟಿಗಾರ್, ಸುನೀಲ್ ಪಣಪಿಲ,ಪ್ರಖ್ಯಾತ್ ಆರ್.ಶೆಟ್ಟಿ, ದಿ.ಪ್ರಶಾಂತ ಪೂಜಾರಿ ತಾಯಿ ಯಶೋಧ ಮತ್ತಿತರರ ಪ್ರಮುಖರು ಪಾಲ್ಗೊಂಡಿದ್ದರು