ಮ್ಯಾಪ್ಸ್ ಕಾಲೇಜಿನ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎರಿಕ್ ಒಝರಿಯೋ ರವರಿಗೆ ನುಡಿ ನಮನ ಕಾರ್ಯಕ್ರಮ

ಮಂಗಳೂರು: ತುಳು ಪರಿಷತ್ ಮಂಗಳೂರು ವತಿಯಿಂದ ಬಂಟ್ಸ್ ಹಾಸ್ಟೆಲ್ ನ ಮ್ಯಾಪ್ಸ್ ಕಾಲೇಜುನಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಎರಿಕ್ ಒಝರಿಯೋ ರವರಿಗೆ ನುಡಿ ನಮನ ಕಾರ್ಯಕ್ರಮ ನಡೆಯಿತು.

ಗೌರವ ಅಧ್ಯಕ್ಷರಾದ ಡಾ, ಪ್ರಭಾಕರ್ ನೀರುಮಾರ್ಗ ರವರು ಮಾತನಾಡಿ ಎರಿಕ್ ಒಝರಿರೋ ರವರು ಕೊಂಕಣಿ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಮತ್ತು ಅವರ ಸಾಧನೆಗಳನ್ನು ತಿಳಿಸಿದರು. ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಎರಿಕ್ ಒಝರಿಯೋ ರವರ ಹೆಸರು ಚಿರ ಸ್ಮರಣಿಯ ಎಂದು ಹೇಳಿದರು. ಅಧ್ಯಕ್ಷರಾದ ಶುಭೋದಯ ಆಳ್ವ ಮಾತನಾಡಿ ಎರಿಕ್ ಒಝರಿಯೋ ರವರು ಅಪ್ಪಟ ಜಾತ್ಯತೀತ ವ್ಯಕ್ತಿತ್ವ ಮತ್ತು ಎಲ್ಲರನ್ನು ಪ್ರೀತಿಸುವ, ಗೌರವಿಸುವ ವ್ಯಕ್ತಿತ್ವ ಅವರದು ಎಂದು ತಿಳಿಸದರು.

ತುಳು ಪರಿಷತ್ ಸದಸ್ಯರಾದ ಎಡ್ವರ್ಡ್ ಪಿಂಟೋ ಮಾತನಾಡಿ ಎರಿಕ್ ಒಝರಿಯೋ ರವರ ಬದುಕಿನ ಸಾಧನೆ, ಹೋರಾಟ, ಪ್ರಶಸ್ತಿ ಗಳನ್ನು ವಿವರವಾಗಿ ತಿಳಿಸಿದರು. ಡಾ, ಸುಮತಿ ಹೆಗ್ಡೆ, ಡಾ, ಮಾಲತಿ ಶೆಟ್ಟಿ ಮಾಣೂರು, ಡಾ, ಮೀನಾಕ್ಷಿ ರಾಮಚಂದ್ರ, ಸುಧಾ ನಾಗೇಶ್, ಶಾಲಿನಿ ರೈ, ರಾಕೇಶ್ ಕುಂದರ್, ಜ್ಯೋತಿ,ಕೀರ್ತಿ, ಕವಿತ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಅಮಿತ ಅಶ್ವಿನ್ ಉಳ್ಳಾಲ್ ವಂದಿಸಿದರು.

error: Content is protected !!