ಮಧ್ಯ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿ ಚಂದ್ರಹಾಸ ಕೆ ಶೆಟ್ಟಿ ಆಯ್ಕೆ

ಸುರತ್ಕಲ್: ಮಧ್ಯ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯನ್ನು ದೇವಸ್ಥಾನದ ಅಡಳಿತ ಮಂಡಳಿಯ ಅಧ್ಯಕ್ಷ ರಮೇಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ವಠಾರದಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ವಾಸುದೇವಾ ತಂತ್ರಿ ಶಿಬರೂರು, ಉಮಾನಾಥ ಕೋಟ್ಯಾನ್ ಶಾಸಕರು ಮೂಡಬಿದ್ರೆ ವಿಧಾನಸಭಾ ಕ್ಷೇತ್ರ, ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು, ಶಂಕರ ಹೆಗಡೆ ಮಧ್ಯಬೀಡು, ಅಶೋಕ್ ಪೈವ ಹೆಗಡೆ ಮಿತ್ತೋಡಿ ಕುತ್ತೆತ್ತೂರು, ಅನಿಲ್ ಶೆಟ್ಟಿ ತೇವು ಸೂರಿಂಜೆ, ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ ಗೋಳಿದಡಿಗುತ್ತು, ರಾಘವ ಬಿ ಶೆಟ್ಟಿ ಕುಲ್ಲಂಗಾಲು ಅಧ್ಯಕ್ಷರಾಗಿ ಚಂದ್ರಹಾಸ ಕೆ ಶೆಟ್ಟಿ ಕುಲ್ಲಂಗಾಲು, ಕಾರ್ಯಾಧ್ಯಕ್ಷರಾಗಿ ಮನೋಹರ ಶೆಟ್ಟಿ ಸೂರಿಂಜೆ, ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಕಣ್ವತೀರ್ಥ, ಕೋಶಾಧಿಕಾರಿ ಹರೀಶ್ ಭಂಡಾರಿ ಮಧ್ಯ ಮುಂತಾದವರನ್ನು ಅಯ್ಜೆ ಮಾಡಲಾಯಿತು.

error: Content is protected !!