ಬೆಚ್ಚಿಬೀಳಿಸುವ ಸುದ್ದಿ! 400 ಕೆ.ಜಿ. ಆರ್‌ಡಿಎಕ್ಸ್‌ ಜೊತೆಗೆ ಮಾನವಬಾಂಬರ್‌ಗಳು ಮುಂಬೈ ಎಂಟ್ರಿ

ಮುಂಬೈ: ʻಒಂದು ಕೋಟಿ ಜನರು ಸಾಯುತ್ತಾರೆ. ವಾಣಿಜ್ಯ ನಗರಿ ಮುಂಬೈನ ವಿವಿಧೆಡೆ 400 ಕೆಜಿ ಆರ್‌ ಡಿಎಕ್ಸ್‌ ನೊಂದಿಗೆ 34 ಮಾನವ ಬಾಂಬರ್‌ ಗಳು 34 ವಾಹನಗಳಲ್ಲಿ ಪ್ರವೇಶಿಸಿದ್ದಾರೆ…! ʼ ಈ ರೀತಿ ಸಹಾಯವಾಣಿಗೆ ಬಂದ ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ.

👉 ಮುಂಬೈ ಸಂಚಾರಿ ಪೊಲೀಸ್ ಸಹಾಯವಾಣಿಗೆ ಬೆದರಿಕೆ ಕರೆ
👉 34 ವಾಹನಗಳಲ್ಲಿ 400 ಕೆಜಿ ಆರ್‌ಡಿಎಕ್ಸ್ ಎಂದು ಶಾಕಿಂಗ್ ಕರೆ
👉 34 ಮಾನವ ಬಾಂಬರ್‌ಗಳು ಎಂಟ್ರಿ – ಒಂದು ಕೋಟಿ ಜನರು ಸಾಯುತ್ತಾರೆ ಎಂಬ ಬೆದರಿಕೆ
👉 ಲಷ್ಕರ್-ಎ-ಜಿಹಾದಿ ಸಂಘಟನೆಯ ಹೆಸರಿನಲ್ಲಿ ಕರೆ
👉 ಗಣೇಶ ವಿಸರ್ಜನೆ ಹಬ್ಬದ ಮುನ್ನವೇ ಬೆಚ್ಚಿ ಬಿದ್ದ ಮುಂಬೈ 
👉 ಸಿಎಸ್ಎಂಟಿ, ದಾದರ್, ಚೌಪಾಟಿ ಬಳಿ ಭಾರೀ ಭದ್ರತೆ
👉 ಬಾಂಬ್ ಶೋಧ ದಳ, ಕಮಾಂಡೋ ಪಡೆ, ವಾಹನ ತಪಾಸಣೆ ತೀವ್ರ
👉 ಹಿಂದೆಯೂ ಬಂದಿದ್ದವು ಹುಸಿ ಬಾಂಬ್ ಕರೆಗಳು
👉 “ಯಾವುದೇ ಬೆದರಿಕೆಯನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ” – ಮುಂಬೈ ಪೊಲೀಸರು

ಶುಕ್ರವಾರ ಬೆಳಿಗ್ಗೆ ಸಂಚಾರಿ ಪೊಲೀಸ್ ಸಹಾಯವಾಣಿಗೆ ಬಂದ ಕರೆಯ ಪ್ರಕಾರ 34 ವಾಹನಗಳಲ್ಲಿ 400 ಕೆಜಿ ಆರ್‌ಡಿಎಕ್ಸ್ ಹೊತ್ತ ಮಾನವ ಬಾಂಬರ್‌ಗಳನ್ನು ನಗರಕ್ಕೆ ಕಳುಹಿಸಲಾಗಿದೆ . ಲಷ್ಕರ್-ಎ-ಜಿಹಾದಿ ಸಂಘಟನೆಯ ಹೆಸರಿನಲ್ಲಿ ಬಂದಿರುವ ಈ ಕರೆ ಇದಾಗಿದ್ದು “ಒಂದು ಕೋಟಿ ಜನರು ಸಾಯುತ್ತಾರೆ” ಎಂಬ ಬೆದರಿಕೆಯನ್ನು ಒಳಗೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅನಂತ ಚತುರ್ದಶಿ ಹಾಗೂ ಗಣೇಶ ವಿಸರ್ಜನೆ ಕಾರ್ಯಕ್ರಮಗಳು ಆರಂಭವಾಗುತ್ತಿರುವ ಸಂದರ್ಭದಲ್ಲಿ ಬಂದಿರುವ ಈ ಬೆದರಿಕೆ ಹಿನ್ನೆಲೆಯಲ್ಲಿ ನಗರದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಸಿಎಸ್ಎಂಟಿ ರೈಲು ನಿಲ್ದಾಣ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಬಾಂಬ್ ಶೋಧ ದಳಗಳು (ಬಿಡಿಡಿಎಸ್) ಸಕ್ರಿಯಗೊಳಿಸಲಾಗಿದ್ದು, ವಾಹನ ತಪಾಸಣೆ ತೀವ್ರಗೊಳಿಸಲಾಗಿದೆ.

ಇದೇ ವೇಳೆ, ಹಿಂದೆಯೂ ಇಂತಹ ಹುಸಿ ಕರೆಗಳು ಬಂದಿರುವುದನ್ನು ಪೊಲೀಸರು ಸ್ಮರಿಸಿದರು. ಆಗಸ್ಟ್‌ನಲ್ಲಿ ಗಿರ್ಗಾಂವ್‌ನ ಇಸ್ಕಾನ್ ದೇವಾಲಯಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದರೂ ಅದು ಸುಳ್ಳೆಂದು ತೋರಿಬಂದಿತ್ತು. ಅದೇ ರೀತಿ ಜುಲೈನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಬೆದರಿಕೆ ಕರೆ ಬಂದಿತ್ತು.

ಥಾಣೆಯ ಕಲ್ವಾ ರೈಲು ನಿಲ್ದಾಣಕ್ಕೂ ಇದೇ ರೀತಿಯ ಹುಸಿ ಕರೆ ನೀಡಿದ ವ್ಯಕ್ತಿಯನ್ನು ಇತ್ತೀಚೆಗೆ ಬಂಧಿಸಲಾಗಿತ್ತು. “ಈ ಬಾರಿಯ ಕರೆ ನಿಜವೇ ಅಥವಾ ಹುಸಿಯೋ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಯಾವುದೇ ರೀತಿಯ ಅಪಾಯಕ್ಕೆ ಅವಕಾಶ ನೀಡದೆ ಪೊಲೀಸರು ಪೂರ್ಣ ಸನ್ನದ್ಧರಾಗಿದ್ದಾರೆ” ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

error: Content is protected !!