ಎಟಿಎಂ ಕಳ್ಳತನ ಯತ್ನ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿ

ಉಳ್ಳಾಲ: ತಡರಾತ್ರಿ ಕೋಟೆಕಾರು ಬೀರಿ ಎಟಿಎಂನಲ್ಲಿ ಹಣ ಕದಿಯಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ದೆಹಲಿಯ ಕಣ್ಗಾವಲು ವ್ಯವಸ್ಥೆಯ ಎಚ್ಚರಿಕೆಯ ಮೇರೆಗೆ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿಯ ನಿವಾಸಿ ನಾಗಪ್ಪ ಕೇರಳಟ್ಟಿ (41) ಎಂಬಾತನನ್ನು ಮುಂಜಾನೆ 3 ಗಂಟೆ ಸುಮಾರಿಗೆ ಎಸ್‌ಬಿಐ ಎಟಿಎಂನಲ್ಲಿದ್ದ ಕ್ಯಾಶ್ ಬಾಕ್ಸ್ ಒಡೆಯಲು ಯತ್ನಿಸುತ್ತಿದ್ದಾಗ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಪೊಲೀಸರ ಪ್ರಕಾರ, ನಾಗಪ್ಪ ಬೆಳಗಿನ ಜಾವ 2:30 ರ ಸುಮಾರಿಗೆ ಎಟಿಎಂ ಒಳಗೆ ಪ್ರವೇಶಿಸಿ, ತಾನು ತಂದಿದ್ದ ಉಪಕರಣಗಳನ್ನು ಬಳಸಿ ಕ್ಯಾಶ್ ಬಾಕ್ಸ್ ಅನ್ನು ಹಾನಿಗೊಳಿಸಿದ್ದಾನೆ. ದೆಹಲಿಯಿಂದ ಹಿಡಿದು ವಿವಿಧ ಜಿಲ್ಲೆಗಳ ಎಟಿಎಂಗಳ ಮೇಲೆ ನಿಗಾ ಇಡುವ ದೆಹಲಿಯ ಕಣ್ಗಾವಲು ವ್ಯವಸ್ಥೆಯು ಈ ಕೃತ್ಯದ ಬಗ್ಗೆ ಎಚ್ಚರಿಕೆ ನೀಡಿದೆ.

(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298

ಬಳಿಕ ಕಣ್ಗಾವಲು ಸಿಬ್ಬಂದಿ ರಂಜಿತ್ ಅವರು ಬೀರಿ ಎಟಿಎಂ ನೋಡಿಕೊಳ್ಳುವ ದೀಪಕ್ ಅಮಿನ್ ಅವರಿಗೆ ಮಾಹಿತಿ ನೀಡಿದ್ದು, ಅವರು ತಕ್ಷಣ 112 ಗೆ ಕರೆ ಮಾಡಿದ್ದಾರೆ. ಈ ಮಾಹಿತಿಯನ್ನು ಉಳ್ಳಾಲ ಪೊಲೀಸರಿಗೆ ರವಾನಿಸಿದ್ದು, ಅವರು ಕೂಡಲೇ ಸ್ಥಳಕ್ಕೆ ಧಾವಿಸಿ ಎಟಿಎಂ ಒಳಗೆ ಆರೋಪಿಯನ್ನು ಬಂಧಿಸಿದ್ದಾರೆ.

error: Content is protected !!