ಸೆ.7  ರಂದು ಫಾತಿಮಾ ರಲಿಯಾ ಅವರ ‘ಕೀಮೋ’ ಪುಸ್ತಕ ಬಿಡುಗಡೆ !

ಮಂಗಳೂರು: ನಗರದ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್‌ ಸಿಕ್ವೇರಾ ಸಭಾಂಗಣದಲ್ಲಿ ಭಾನುವಾರ(ಸೆ.7) ದಂದು  ಸಂಜೆ‌ 4 ಗಂಟೆಗೆ ಫಾತಿಮಾ ರಲಿಯಾ ಅವರ ಅನುಭವ ಕಥನ ‘ಕೀಮೋ’ ಬಿಡುಗಡೆಯಾಗಲಿದೆ.  ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಪುಸ್ತಕ ಬಿಡುಗಡೆ ಮಾಡಲಿದ್ದು, ಪುಸ್ತಕದ ಕುರಿತು ರಮ್ಯ ಕೆ.ಜಿ. ಮೂರ್ನಾಡು ಮತ್ತು ಶರೀಫ್ ಹಿಮಮಿ ಶುಟ್ಟಿಕೊಪ್ಪ ಮಾತನಾಡಲಿದ್ದಾರೆ‌.

 

ಈ ಪುಸ್ತಕವನ್ನು ‘ಜೀರುಂಡೆ ಪುಸ್ತಕ’ ಪ್ರಕಟಿಸಿದ್ದು ಇದು ಫಾತಿಮಾ ರಲಿಯಾರ ನಾಲ್ಕನೇ ಕೃತಿಯಾಗಿದೆ. ‘ಜೀರುಂಡೆ ಪುಸ್ತಕ’ದ ಎಲ್ಲಾ ಕೃತಿಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298

error: Content is protected !!