ಉತ್ತರಪ್ರದೇಶ: ಪತಿ ಹಾಗೂ ಅತ್ತೆ ಮಾವ ಸೇರಿ ಕೊಡುತ್ತಿದ್ದ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಮಕ್ಕಳ ಎದುರೇ ಮನೆಯ ಎರಡನೇ ಮಹಡಿಯಿಂದ ಕೆಳಗೆ ಜಿಗಿದು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಗಂಭೀರ ಗಾಯಗೊಂಡು ಅಂಗಳದಲ್ಲಿ ಬಿದ್ದಿರುವ ಪತ್ನಿಗೆ ಪತಿ ಹಲ್ಲೆ ನಡೆಸಿರುವುದು ಹೃದಯ ವಿದ್ರಾಹಕ ಘಟನೆ ಉತ್ತರಪ್ರದೇಶದ ಗೊಂಡಾ ಪ್ರದೇಶದ ಡಕೌಲಿ ಗ್ರಾಮದಲ್ಲಿ ಕಂಡುಬಂದಿದೆ.
ಗಂಭೀರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಮಹಿಳೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298
ನೆರೆಮನೆಯವರು ನೀಡಿರುವ ಹೇಳಿಕೆಯಂತೆ ಕಟ್ಟಡದಿಂದ ಜಿಗಿದ ಮಹಿಳೆಗೆ ಪತಿ ಸೇರಿ ಅತ್ತೆ ಮಾವ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಹೇಳಿದ್ದಾರೆ ಇದೇ ಕಾರಣಕ್ಕೆ ಆಕೆ ಮನೆಯ ಮೇಲಿಂದ ಜಿಗಿದಿದ್ದು ಇದರ ಹಿಂದೆ ಪತಿ, ಅತ್ತೆ ಮಾವ ನೇರ ಕಾರಣ ಎಂದು ಹೇಳಿಕೊಂಡಿದ್ದಾರೆ.
ಪೊಲೀಸರು ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.