ತುಮಕೂರು: ಕಾಂಗ್ರೆಸ್‌ನಲ್ಲಿ ನನಗೆ ಯಾವುದೇ ಸಮಸ್ಯೆಯಿಲ್ಲ. “ಬಿಜೆಪಿಗೆ ಹೋಗುವ ಕರ್ಮ ನನಗಿಲ್ಲ” ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಇರುವವರೆಗೂ ನನ್ನ ಸ್ಥಾನಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದರು.
ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿ ಬಿಜೆಪಿ ಸೇರಲಿದ್ದಾರೆ ಎಂಬ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಹೇಳಿಕೆಗೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಬುಧವಾರ(ಸೆ.3) ದಂದು ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದ ರಾಜಣ್ಣ, ಯಾವನ್ರಿ ಹಾಗೆ ಹೇಳಿದ್ದು ಎಂದಿದ್ದಾರೆ. ಮಾಗಡಿ ಬಾಲಕೃಷ್ಣ ಎಂದು ಹೆಸರು ಹೇಳಿದಾಕ್ಷಣ, ಅವನು ಮೊದಲು ಬ್ರೈನ್ ಮ್ಯಾಪಿಂಗ್ ಮಾಡಿಕೊಳ್ಳಲಿ ಎಂದರು.
ನಾನು ಜನರ ಪ್ರೀತಿಯಿಂದ ಬೆಳೆದಿದ್ದೇನೆ, ರಾಜಕೀಯದಲ್ಲಿ ಬೆಳೆಯಲು ದುಡ್ಡು-ಜಾತಿ ಬೇಕು, ಅವೆರಡೂ ನನಗಿಲ್ಲ. ನಿಮ್ಮೆಲ್ಲರ ಪ್ರೀತಿ ವಿಶ್ವಾಸವೇ ನನಗೆ ಶಕ್ತಿಯಾಗಿದ್ದು ಅದನ್ನು ಉಳಿಸಿಕೊಂಡು ಹೋಗುವ ಶಕ್ತಿಯನ್ನು ದೇವರು ನನಗೆ ನೀಡಿದರೆ ಸಾಕು ಎಂದರು.
(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298
ಈಗ ಮಾಜಿ ಶಾಸಕನಾಗಿದ್ದರೂ ನನ್ನ ಮೇಲಿನ ನಿಮ್ಮ ಪ್ರೀತಿ ಎಂಥದ್ದು ಎಂಬುದು ತಿಳಿದಿದೆ. ಕಳೆದ ಬಾರಿ 35 ಸಾವಿರ ಬಹುಮತ ನೀಡಿದ್ದು ಈಗ ಚುನಾವಣೆ ನಡೆದರೂ ಅದಕ್ಕಿಂತ ಹೆಚ್ಚು ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ. ಸಚಿವ ಸ್ಥಾನ ಹೋಗಲು ನಾನು ಭ್ರಷ್ಟಾಚಾರ ನಡೆಸಿಲ್ಲ. ಯಾವುದೇ ಆರೋಪ ಎದುರಿಸಿ ರಾಜೀನಾಮೆ ನೀಡಿಲ್ಲ. ಜನಪರವಾಗಿ ರಾಜ್ಯದಲ್ಲಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಅಥವಾ ಪಕ್ಷೇತರನಾಗಿ ನಿಂತರೂ ಜನರು ನನ್ನ ಕೈಹಿಡಿಯುವ ವಿಶ್ವಾಸವಿದೆ. ಮತಗಳ್ಳತನ ವಿಚಾರದಲ್ಲಿ ರಾಹುಲ್ ಗಾಂಧಿ ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದ ರಾಜಣ್ಣ ಅಪಪ್ರಚಾರಕ್ಕೆ ಜನತೆ ಕಿವಿಗೊಡುವುದು ಬೇಡ ಎಂದರು.