ರಾಮ್‌ ಚರಣ್‌ ತೇಜ-ಉಪಾಸನಾ ದಂಪತಿಗೆ ಅವಳಿ ಮಕ್ಕಳು!

ಚೆನ್ನೈ: ಟಾಲಿವುಡ್‌ ಸ್ಟಾರ್ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೆಲಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದು ಗಂಡು ಮಗು ಹಾಗೂ ಒಂದು ಹೆಣ್ಣು ಮಗು ಜನಿಸಿರುವುದು ಮೆಗಾ ಕುಟುಂಬಕ್ಕೆ ಸಂತೋಷ ತಂದಿದೆ. ಈ ಸಿಹಿ ಸುದ್ದಿಯನ್ನು ಮೆಗಾ ಸ್ಟಾರ್ ಚಿರಂಜೀವಿ ಅವರು ಅಧಿಕೃತವಾಗಿ ಖಚಿತಪಡಿಸಿದ್ದಾರೆ. 2023ರಲ್ಲಿ ದಂಪತಿಗೆ ಮೊದಲ ಹೆಣ್ಣು ಮಗು ಜನಿಸಿತ್ತು. ಆ ಮಗುವಿಗೆ ‘ಕ್ಲಿನ್ ಕಾರಾ’ ಎಂಬ ಸುಂದರ ಹೆಸರು ಇಡಲಾಗಿತ್ತು. ಇದೀಗ ಅವಳಿ ಮಕ್ಕಳ ಆಗಮನದಿಂದ ಚರಣ್ ಕುಟುಂಬದಲ್ಲಿ ಇನ್ನಷ್ಟು ಸಂಭ್ರಮ ಮನೆ ಮಾಡಿದೆ.

error: Content is protected !!