ಬಾಹ್ಯಾಕಾಶದಿಂದ ಅಂಚಿನಲ್ಲಿ ಕಂಡುಬಂದಿತು ಅಪರೂಪದ ಕೆಂಪು ಅಗ್ನಿಜ್ಯೋತಿ

ವಾಷಿಂಗ್ಟನ್: ಭೂಮಿಯ ಮೇಲೆ ಅಪರೂಪವಾಗಿ ಗೋಚರಿಸುವ ಕೆಂಪು ಬಣ್ಣದ ಔರೋರಾ (ಅಗ್ನಿಜ್ಯೋತಿ)ದ ಅದ್ಭುತ ದೃಶ್ಯವನ್ನು ನಾಸಾ ಅಂತರಿಕ್ಷಯಾತ್ರಿಯೊಬ್ಬರು ಬಾಹ್ಯಾಕಾಶದಿಂದ ಚಿತ್ರೀಕರಿಸಿ ಜಗತ್ತಿನೊಂದಿಗೆ ಹಂಚಿಕೊಂಡಿದ್ದಾರೆ.

ಅಂತರಿಕ್ಷಯಾತ್ರಿ ಡಾನ್ ಪೆಟ್ಟಿಟ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವೀಡಿಯೊ ಹಂಚಿಕೊಂಡಿದ್ದು, “ಇಂತಹ ಆಕಾರ ಮತ್ತು ತೀವ್ರತೆಯ ಕೆಂಪು ಔರೋರಾಗಳು ಅತೀ ಅಪರೂಪ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳ ಮಿಷನ್ ಸಮಯದಲ್ಲಿ ಕೇವಲ ಎರಡು ಅಥವಾ ಮೂರು ಬಾರಿ ಮಾತ್ರ ಇದು ಗೋಚರಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ

ಔರೋರಾ ಹೇಗೆ ಉಂಟಾಗುತ್ತದೆ?
ಸೂರ್ಯನಿಂದ ಹೊರಸೂಸಲ್ಪಡುವ ವಿದ್ಯುತ್ ಭರಿತ ಕಣಗಳು (ಎಲೆಕ್ಟ್ರಾನ್ ಹಾಗೂ ಪ್ರೋಟಾನ್‌ಗಳು) ಭೂಮಿಯ ಚುಂಬಕ ಕ್ಷೇತ್ರ(ಗುರುತ್ವಾಕರ್ಷಣೆ)ದೊಂದಿಗೆ ಸಂಧಿಸುವಾಗ ಅವು ಧ್ರುವಗಳ ಕಡೆಗೆ ಹರಿಯುತ್ತವೆ. ಅಲ್ಲಿ ವಾಯುಮಂಡಲದ ಅಣುಗಳು ಹಾಗೂ ಅಣುಗುಚ್ಛಗಳೊಂದಿಗೆ ಢಿಕ್ಕಿ ಹೊಡೆದು ಅವುಗಳಿಂದ ಬೆಳಕು ಹೊರಹೊಮ್ಮುತ್ತದೆ.

ನಾಸಾದ ಮಾಹಿತಿಯ ಪ್ರಕಾರ, ಔರೋರಾಗಳು ಮುಖ್ಯವಾಗಿ ಭೂಮಿಯ ಐಯಾನೋಸ್ಫಿಯರ್ ಎಂಬ ಮೇಲ್ಪಟ್ಟ ವಾತಾವರಣ ಪದರದಲ್ಲಿ ನಿರ್ಮಾಣವಾಗುತ್ತವೆ. ಆದರೆ, ಅವುಗಳ ಮೂಲ ಕ್ರಿಯೆ ಸೂರ್ಯದಲ್ಲೇ ಆರಂಭವಾಗುತ್ತದೆ. ವಿಶೇಷವಾಗಿ, ಕೋರೊನಲ್ ಮಾಸ್ ಇಜೆಕ್ಷನ್ (ಸೂರ್ಯನ ಮೇಲ್ಮೈ ಸ್ಫೋಟ) ವೇಳೆ ಬಿಡುಗಡೆಯಾಗುವ ಕಣಗಳು ಬೃಹತ್ ಪ್ರಮಾಣದಲ್ಲಿ ಬಾಹ್ಯಾಕಾಶದಲ್ಲಿ ಹರಡುತ್ತವೆ.

ಬಣ್ಣಗಳ ವೈವಿಧ್ಯತೆ
ಔರೋರಾಗಳು ಹಸಿರು, ಕೆಂಪು, ನೀಲಿ ಮತ್ತು ನೇರಳೆ ಬಣ್ಣಗಳಲ್ಲಿ ಗೋಚರಿಸಬಹುದು. ಬಣ್ಣವು ಕಣಗಳ ಶಕ್ತಿಮಟ್ಟ ಮತ್ತು ವಾತಾವರಣದ ದಟ್ಟಣೆಯ ಮೇಲೆ ಅವಲಂಬಿತವಾಗಿರುತ್ತದೆ. ಅವು ಬೆಳಕಿನ ತೆರೆಗಳು, ಕಿರಣಗಳು ಅಥವಾ ಪಟಾಕಿಗಳಂತಿರುವ ಪರಿವರ್ತನಶೀಲ ಆಕಾರಗಳಲ್ಲಿ ಗೋಚರಿಸುತ್ತವೆ. ಕೆಲವೊಮ್ಮೆ ಅವು ತೀವ್ರವಾಗಿ ಚಲಿಸಿ ಕ್ಷಣಕ್ಷಣಕ್ಕೆ ರೂಪ ಬದಲಿಸುತ್ತವೆ.

ಅಪರೂಪದ ಕೆಂಪು ಜ್ಯೋತಿ
ಸಾಮಾನ್ಯವಾಗಿ ಹಸಿರು ಬಣ್ಣದ ಔರೋರಾಗಳೇ ಹೆಚ್ಚು ಕಂಡುಬರುತ್ತವೆ. ಆದರೆ ಕೆಂಪು ಬಣ್ಣದ ಅಗ್ನಿಜ್ಯೋತಿಗಳು ಅಪರೂಪ. ಇಂತಹ ಅಪರೂಪದ ದೃಶ್ಯವನ್ನು ನೇರವಾಗಿ ಬಾಹ್ಯಾಕಾಶದಿಂದ ವೀಕ್ಷಿಸಿ ದಾಖಲಿಸಿರುವುದು ವಿಜ್ಞಾನ ಲೋಕಕ್ಕೆ ಮತ್ತೊಂದು ಕುತೂಹಲಕಾರಿ ದಾಖಲೆ.

error: Content is protected !!