ಮುಂಬೈ: ಜೀವವೈದ್ಯಕೀಯ ವಿಜ್ಞಾನದಲ್ಲಿ ಅಕಾಡೆಮಿಕ್ ಹಿನ್ನಲೆ ಹೊಂದಿರುವ ಸಾರಾ ತೆಂಡೂಲ್ಕರ್ ಅವರಿಗೆ ತಮ್ಮ ಚರ್ಮದ ಆರೈಕೆಯಲ್ಲಿ ಏನು ಬಳಸಬೇಕು ಎಂಬ ಅರಿವು ಚೆನ್ನಾಗಿ ಇದೆ. ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ 27ರ ಹರೆಯದ ಸಾರಾ ತೆಂಡೂಲ್ಕರ್ ತಮ್ಮ ಸ್ಕಿನ್‌ಕೇರ್ ರೂಟೀನ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಪಿಲೇಟಿಸ್ ಸ್ಟುಡಿಯೊ ಒಂದನ್ನು ಇತ್ತೀಚೆಗೆ ಆರಂಭಿಸಿರುವ ಸಾರಾ, “ನನಗೆ ಚರ್ಮದ ಆರೈಕೆ ಎಂದರೆ ತಣ್ಣೀರಲ್ಲಿ ತೊಳೆಯುವುದಷ್ಟೆ.
ನನ್ನ ರೂಟೀನ್ ತುಂಬಾ ಬೇಸಿಕ್ – ಫೇಸ್‌ವಾಶ್, ಸೀರಮ್ ಅಥವಾ ಟೋನರ್, ಮಾಯಿಶ್ಚರೈಸರ್ ಹಾಗೂ ಸನ್‌ಸ್ಕ್ರೀನ್” ಎಂದು ಹೇಳಿದ್ದಾರೆ.
ಕಡೇಗೊಮ್ಮೆ ಆಮ್ಲ (ಅಸಿಡ್ ಪೀಲ್) ಬಳಸುವುದಾಗಿ ಹೇಳಿದ ಸಾರಾ, ಅದನ್ನೂ ಕಡಿಮೆ ಮಟ್ಟದಲ್ಲೇ ಇಟ್ಟುಕೊಳ್ಳುತ್ತಾರೆ.
ವೈದ್ಯಕೀಯವಾಗಿ ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡಲು, ಮೊಡವೆ, ಕಲೆ ಹಾಗೂ ಸ್ಕಾರ್ ಕಡಿಮೆ ಮಾಡಲು ಆಮ್ಲ ಪೀಲ್ ಸಹಕಾರಿ ಎಂದು ಅಧ್ಯಯನಗಳು ತಿಳಿಸಿವೆ.
ಚರ್ಮದ ಆರೋಗ್ಯಕ್ಕೆ ಉತ್ಪನ್ನಗಳಿಗಿಂತ ಜೀವನಶೈಲಿ ಮುಖ್ಯವೆಂದು ಸಾರಾ ಒತ್ತಿಹೇಳಿದ್ದಾರೆ.
“ಹಾಲು, ಸಕ್ಕರೆ ಕಡಿಮೆ ಮಾಡಿದಾಗ, ನೀರು ಹೆಚ್ಚು ಕುಡಿದಾಗ, ಹಾಗೂ ಸರಿಯಾದ ನಿದ್ರೆ ಮಾಡಿದಾಗ ನನ್ನ ಚರ್ಮ ಹೆಚ್ಚು ಹೊಳಪು ಕಾಣಿಸುತ್ತದೆ ಎಂದು ಸಾರಾ ಹೇಳಿದ್ದಾರೆ.
ದಿನನಿತ್ಯದ ಆರೋಗ್ಯಕರ ಅಭ್ಯಾಸಗಳ ಜೊತೆಗೆ ಸ್ಕಿನ್‌ಕೇರ್‌ನ ಸಮತೋಲನವೇ ನನಗೆ ಯಾವಾಗಲೂ ಒಳ್ಳೆಯದು” ಎಂದು ಹೇಳಿದ್ದಾರೆ.
ಪ್ರತೀ ದಿನ ಸ್ನಾನ ಮಾಡಬೇಕು, ಸ್ನಾನ ಮಾಡದೆ ಮಲಗಬಾರದು ಎಂದು ಹುಡುಗಿಯರಿಗೆ ಸಾರಾ ಸಲಹೆ ನೀಡಿದ್ದಾರೆ.
ಸಾರಾ ತೆಂಡೂಲ್ಕರ್‌ಗಾಗಿ ಚರ್ಮದ ಆರೋಗ್ಯ ಎಂದರೆ ದುಬಾರಿ ಉತ್ಪನ್ನಗಳ ಬಳಕೆ ಅಲ್ಲ, ಬದಲಾಗಿ ದಿನನಿತ್ಯದ ಸಣ್ಣ ಬದಲಾವಣೆಗಳ ಮೂಲಕ ತಾಜಾ ಮತ್ತು ಪ್ರಕಾಶಮಾನವಾದ ಚರ್ಮವನ್ನು ಕಾಪಾಡಿಕೊಳ್ಳುವುದಾಗಿದೆ.