ಕಲಬುರಗಿ: ತಾಲೂಕಿನ ಮೇಳಕುಂದಾ ಗ್ರಾಮದಲ್ಲಿ ಅನ್ಯಜಾತಿ ಹುಡಗನನ್ನ ಲವ್ ಮಾಡಿದ್ದಕ್ಕೆ ತಂದೆ ತನ್ನ ಸ್ವಂತ 18 ವರ್ಷದ ಮಗಳನ್ನು ಕೊಂದು ಸುಟ್ಟು ಹಾಕಿರುವಂತಹ ಘಟನೆ ನಡೆದಿದೆ.
ಕಲಬುರಗಿ ನಗರಕ್ಕೆ ಪಿಯುಸಿ ಅಧ್ಯಯನಕ್ಕೆ ಬರುತ್ತಿದ್ದ ವೇಳೆ ಲಿಂಗಾಯತ ಸಮಾಜದ ಯುವತಿ ಅದೇ ಗ್ರಾಮದ ಕುರುಬ ಸಮಾಜದ ಯುವಕ ಮಾಳಪ್ಪ ಪೂಜಾರಿಯನ್ನು ಪ್ರೀತಿಸುತ್ತಿದ್ದಳು. ಮೂರ್ನಾಲ್ಕು ತಿಂಗಳ ಹಿಂದೆ ಮನೆಯವರಿಗೆ ಪ್ರೀತಿ ವಿಷಯ ತಿಳಿದಿದ್ದು, ಕಾಲೇಜು ಬಿಡಿಸಿದ್ದರು.
ವಿಡಿಯೋ ಸುದ್ದಿಗಳಿಗಾಗಿ VOICE OF PUBLIC ಯೂಟ್ಯೂಬ್ ಚಾನೆಲ್ SUBSCRIBE ಮಾಡಿ LIKE ಮಾಡಿ ಹಾಗೂ Bell Button ಒತ್ತಿ🔔
ಈ ಮಧ್ಯೆ ಕವಿತಾ ಮಾಳಪನನ್ನು ಮದುವೆ ಆಗುತ್ತೇನೆ. ಮದುವೆ ಮಾಡದಿದ್ದರೆ ಓಡಿ ಹೋಗುತ್ತೇನೆ ಎಂದು ಹೇಳಿದ್ದಳು. ಮನೆಯವರು ಅನ್ಯ ಜಾತಿಯ ಯುವಕನನ್ನು ಮದುವೆ ಆಗುವುದನ್ನು ನಿರಾಕರಿಸಿ, ಹೆದರಿಸಿದ್ದಾರೆ. ಆದರೂ ಕವಿತಾ ಪಟ್ಟು ಬಿಡದೇ ಮದುವೆ ಆಗುತ್ತೇನೆಂದು ಹಠ ಹಿಡಿದಿದ್ದಳು.
ಈ ನಡುವೆ ಮಧ್ಯರಾತ್ರಿ ಯುವತಿ ತಂದೆ ಶಂಕರ್, ಸಹೋದರ ಶರಣು, ಸಂಬಂಧಿ ದತ್ತು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ, ಕ್ರಿಮಿನಾಶಕ ಸಿಂಪಡಿಸಿ ವಿಷ ಸೇವಿಸಿ, ಮೃತಪಟ್ಟಿದ್ದಾಳೆಂದು ಬಿಂಬಿಸಿದ್ದಾರೆ. ನಂತರ ಬೆಳಗ್ಗೆ 9ಗಂಟೆ ಸುಮಾರಿಗೆ ಗ್ರಾಮದ ಹೊರವಲಯದ ಸಂಬಂಧಿಕರ ಜಮೀನಿನಲ್ಲಿ ದೇಹವನ್ನು ಸುಟ್ಟು ಹಾಕಿದ್ದಾರೆ. ಆದರೆ ಪೊಲೀಸರ ತನಿಖೆಯ ವೇಳೆ ಈ ಘನಘೋರ ಕೃತ್ಯ ಬಯಲಾಗಿದೆ.
ಸದ್ಯ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.