ಬೆಳಗಾವಿ: ಸಾಮೂಹಿಕ ಅತ್ಯಾಚಾರ, ದರೋಡೆ, ಅಕ್ರಮ ಶಸ್ತ್ರಾಸ್ತ್ರ ಸೇರಿ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಬೆಳಗಾವಿಯಲ್ಲಿ ಇಂದು(ಆ.30) ಮುಂಜಾನೆ ನಡೆದಿದೆ.
ರಮೇಶ್ ಕಿಲಾರಿ ಬಂಧಿತ ಆರೋಪಿ.
ಮಂಗಳೂರು: ಮುಸ್ಲಿಂ ಕುಟುಂಬವೊಂದಕ್ಕೆ ಮನೆಯಲ್ಲಿ ಅಡುಗೆ ಮಾಡಿಕೊಡಲು ಮುಸ್ಲಿಂ ಮಹಿಳೆ ಬೇಕಾಗಿದ್ದಾರೆ. Salary 25000/- ಸಂಪರ್ಕ ಸಂಖ್ಯೆ: 8660040298
ಈತನ ಮೇಲೆ ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದ್ದು ಇದರ ಆಧಾರದ ಮೇಲೆ ಶನಿವಾರ ಮುಂಜಾನೆ ಆರು ಗಂಟೆಯ ವೇಳೆಗೆ ಆರೋಪಿಯನ್ನು ಬಂಧಿಸಲು ಹೋದ ವೇಳೆ ಆರೋಪಿ ಪೊಲೀಸ್ ಪೇದೆ ಷರೀಫ್ ದಫೇದಾರ್ ಮೇಲೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ ಈ ವೇಳೆ ಪಿಎಸ್‌ಐ ಪ್ರವೀಣ್ ಗೊಂಗೊಳ್ಳಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ ಆದರೆ ಇದನ್ನು ಧಿಕ್ಕರಿಸಿ ಪರಾರಿಯಾಗುವ ವೇಳೆ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಸಾಮೂಹಿಕ ಅತ್ಯಾಚಾರ, ದರೋಡೆ, ಅಕ್ರಮ ಶಸ್ತ್ರಾಸ್ತ್ರ ಸೇರಿ ಹಲವು ಪ್ರಕರಣದಲ್ಲಿ ರಮೇಶ ಕಿಲಾರಿ ಭಾಗಿಯಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಕಾರ್ಯಾಚರಣೆ ವೇಳೆ ಗಾಯಗೊಂಡ ಪೊಲೀಸ್ ಪೇದೆ ಹಾಗೂ ಆರೋಪಿಯನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.