ಬೆಳ್ತಂಗಡಿ: ಚಿನ್ನಯ್ಯನನ್ನು ಆತನಿಗೆ ಸಂಬಂಧಿಸಿದ ಸ್ಥಳಗಳಿಗೆ ಮಹಜರು ನಡೆಸಲು ಆ.30 ರ ಶನಿವಾರ ಬೆಳಗ್ಗೆ 6 ಗಂಟೆಗೆ ಎಸ್.ಐ.ಟಿ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ.
10 ದಿನಗಳ ಎಸ್.ಐ.ಟಿ ಕಸ್ಟಡಿಯಲ್ಲಿರುವ ಚಿನ್ನಯ್ಯ ಈಗಾಗಲೇ ಬಹುತೇಕ ವಿಚಾರಗಳನ್ನು ಬಹಿರಂಗಪಡಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲು ಕೆಲವೇ ದಿನಗಳಿರುವುದರಿಂದ ವಿಚಾರಣೆ ಪ್ರಕ್ರಿಯೆ ಬಹುತೇಕ ಪೂರ್ಣಗೊಳಿಸಿ ಮಹಜರು ನಡೆಸಲು ಮುಂದಾಗಿದೆ.
ಮಹಜರು ಪ್ರಕ್ರಿಯೆಯಲ್ಲಿ ಚಿನ್ನಯ್ಯ ಯಾವ ಸ್ಥಳಗಳಿಗೆಲ್ಲ ತೆರಳಿದ್ದ, ಯಾವ ವಿಚಾರಕ್ಕೆ ತೆರಳಿದ್ದ, ತನಿಖೆ ವೇಳೆ ತಿಳಿಸಿದ ವಿಚಾರ ಹಾಗೂ ವಾಸ್ತವಕ್ಕೆ ಸಾಮ್ಯತೆ ಇದೆಯೇ ಎಂಬುದನ್ನು ಪರಿಶೀಲಿಸಲು ಚಿನ್ನಯ್ಯನನ್ನು ಕರೆದೊಯ್ಯಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ VOICE OF PUBLIC ಯೂಟ್ಯೂಬ್ ಚಾನೆಲ್ SUBSCRIBE ಮಾಡಿ LIKE ಮಾಡಿ ಹಾಗೂ Bell Button ಒತ್ತಿ🔔
ಆತನ ಬಗ್ಗೆ ಮಾಧ್ಯಮಗಳು ಹಿಂಬಾಲಿಸುವ ಸಾಧ್ಯತೆಯಿಂದ ಬೆಳ್ಳಂಬೆಳಗ್ಗೆ ಮಹಜರು ನಡೆಸಲು ಕರೆದೊಯ್ಯಲಾಗಿದೆ.