ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇಂದು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿ ಬೆಳೆದಿದೆ. ಆದರೆ, ಅದರ ಪ್ರಥಮ ಆವೃತ್ತಿಯಲ್ಲೇ (2008) ನಡೆದ ಒಂದು ಘಟನೆ ಇಡೀ ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಅದು ಇನ್ನೂ ಅಭಿಮಾನಿಗಳ ನೆನಪುಗಳಲ್ಲಿ ಉಳಿದಿರುವ — ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್ ನಡುವಿನ ‘ಸ್ಲಾಪ್‌ಗೇಟ್’ ವಿವಾದ. ಆದರೆ ಈಗ ಐಪಿಎಲ್ ಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಲಲಿತ್ ಮೋದಿ, ತಮ್ಮ ಭದ್ರತಾ ಕ್ಯಾಮೆರಾದ ದೃಶ್ಯವನ್ನು ಬಹಿರಂಗ ಮಾಡಿದ್ದಾರೆ.
ಏನಾಯ್ತು 2008ರಲ್ಲಿ?
ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯ ಮುಗಿದ ನಂತರ, ಕ್ರೀಡಾಂಗಣದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಹರ್ಭಜನ್ ಸಿಂಗ್, ಪಂಜಾಬ್‌ನ ವೇಗಿ ಶ್ರೀಶಾಂತ್ ಅವರಿಗೆ ಮಾತನಾಡಲೂ ಬಿಡದೆ ಯರ್ರಾಬಿರ್ರಿ ಹೊಡೆದಿದ್ದರು. ಕಣ್ಣೀರು ಹಾಕುತ್ತಿದ್ದ ಶ್ರೀಶಾಂತ್ ಅವರ ಚಿತ್ರ ಮಾಧ್ಯಮಗಳಲ್ಲಿ ವೈರಲ್ ಆಗಿ, ಐಪಿಎಲ್‌ನ ಮೊದಲ ದೊಡ್ಡ ವಿವಾದಕ್ಕೆ ಕಾರಣವಾಯಿತು.
ಆ ಘಟನೆಯ ವಿಡಿಯೋವನ್ನು ಅಧಿಕೃತ ಪ್ರಸಾರದಲ್ಲಿ ತೋರಿಸಲಾಗಲಿಲ್ಲ. ಆದರೆ ಈಗ ಐಪಿಎಲ್ ಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಲಲಿತ್ ಮೋದಿ, ತಮ್ಮ ಭದ್ರತಾ ಕ್ಯಾಮೆರಾದ ದೃಶ್ಯವನ್ನು ಬಹಿರಂಗ ಮಾಡಿದ್ದಾರೆ.
“ಆಟ ಮುಗಿದಿತ್ತು, ಪ್ರಸಾರ ಕ್ಯಾಮೆರಾಗಳು ಆಫ್ ಆಗಿದ್ದವು. ಆದರೆ ನನ್ನ ಕ್ಯಾಮೆರಾ ಆನ್ ಇತ್ತು. ಅದರಲ್ಲಿ ಭಜ್ಜಿ ಶ್ರೀಶಾಂತ್‌ಗೆ ಹಿನ್ನಡೆ ಹೊಡೆದಿರುವುದು ದಾಖಲಾಗಿದೆ,” ಎಂದು ಅವರು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ನಡೆಸಿದ ಬಿಯಾಂಡ್23 ಕ್ರಿಕೆಟ್ ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದಾರೆ.
ಹರ್ಭಜನ್‌ನ ಪಶ್ಚಾತ್ತಾಪ
ಹರ್ಭಜನ್ ಸಿಂಗ್ ಇತ್ತೀಚೆಗೆ ಈ ಘಟನೆಯನ್ನು ಸ್ಮರಿಸುತ್ತಾ ಭಾವುಕರಾಗಿದ್ದರು. “ನನ್ನ ಜೀವನದ ಒಂದು ಕ್ಷಣ ಬದಲಾಯಿಸಲು ಸಾಧ್ಯವಾದರೆ, ಅದು ಶ್ರೀಶಾಂತ್ ಜೊತೆ ನಡೆದ ಘಟನೆ. ನಾನು ತಪ್ಪು ಮಾಡಿದ್ದೇನೆ. ಮಾಡಬಾರದಿತ್ತು. 200 ಬಾರಿ ಕ್ಷಮೆಯಾಚಿಸಿದ್ದೇನೆ. ಆದರೆ ಇನ್ನೂ ಆ ನೆನಪು ನನಗೆ ನೋವುಂಟುಮಾಡುತ್ತದೆʼ ಎಂದು ಹೇಳಿದ್ದಾರೆ.
ಅವರು ಮತ್ತಷ್ಟು ಭಾವುಕರಾಗಿ, “ಒಮ್ಮೆ ಶ್ರೀಶಾಂತ್ ಮಗಳನ್ನು ಭೇಟಿಯಾದಾಗ ಅವಳು ನನಗೆ, ‘ನಾನು ನಿಮ್ಮ ಜೊತೆ ಮಾತನಾಡುವುದಿಲ್ಲ. ನೀವು ನನ್ನ ಅಪ್ಪನನ್ನು ಹೊಡೆದಿದ್ದೀರಿ’ ಎಂದಳು. ನನ್ನ ಹೃದಯ ಒಡೆದಂತಾಯಿತು. ನಾನು ಇನ್ನೂ ಅವಳಿಗೂ ಕ್ಷಮೆ ಕೇಳುತ್ತೇನೆ,” ಎಂದು ಕಣ್ಣೀರಿನಿಂದ ವಿವರಿಸಿದ್ದಾರೆ.
ಕ್ರಿಕೆಟ್‌ಗೆ ದೊಡ್ಡ ಕಳಂಕ!
ಐಪಿಎಲ್ ಆರಂಭದ ಹಂತದಲ್ಲೇ ನಡೆದ ಈ ಘಟನೆ ನಡೆದಿದ್ದು, ಇದು ಜನರ ಕ್ರೀಡಾ ಸ್ಫೂರ್ತಿಗೆ ಧಕ್ಕೆ ತಂದಿತ್ತು. ಇಂದಿಗೂ “ಸ್ಲಾಪ್‌ಗೇಟ್” ಅಂದಾಗ ಅಭಿಮಾನಿಗಳ ಮನಸ್ಸಿನಲ್ಲಿ ಮರುಕಳಿಸುತ್ತದೆ.
ಸ್ಲಾಪ್‌ಗೇಟ್ ಎಂದರೇನು?
ಪಂದ್ಯ ಮುಗಿದ ನಂತರ ಮುಂಬೈ ಇಂಡಿಯನ್ಸ್‌ನ ನಾಯಕನಾಗಿದ್ದ ಹರ್ಭಜನ್ ಸಿಂಗ್, ಕಿಂಗ್ಸ್ ಇಲೆವನ್ ಪಂಜಾಬ್‌ನ ಬೌಲರ್ ಶ್ರೀಶಾಂತ್ ಅವರಿಗೆ ಕೋಪದಲ್ಲಿ ಸಾರ್ವಜನಿಕವಾಗಿ ಹೊಡೆದಿದ್ದರು. ಆ ಹೊಡೆತಕ್ಕೆ ಪ್ರತಿಕ್ರಿಯೆ ನೀಡದೇ ಶ್ರೀಶಾಂತ್ ಮೈದಾನದಲ್ಲೇ ಅಳುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿ, ಇಡೀ ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿತು. ಆ ವಿವಾದವನ್ನು ನಂತರದಿಂದಲೇ “Slapgate” ಎಂದು ಕರೆಯಲಾಗತೊಡಗಿತು.