ತುಳುವಿಗೊಂದು ಜಬರ್ದಸ್ತ್‌ ಮಾಸ್‌ ಸಿನಿಮಾ… ನೆತ್ತೆರೆಕೆರೆ!

-ಶಶಿ ಬೆಳ್ಳಾಯರು

ಹೆಸರೇ ಹೇಳುವಂತೆ ಸಿನಿಮಾದಲ್ಲಿ ʻನೆತ್ತೆರ್‌ʼ(ರಕ್ತ) ಇದೆ, ಹಾಗಂತ ಸೆಂಟಿಮೆಂಟ್‌, ಲವ್‌, ಕಾಮಿಡಿ, ಯಾವುದೂ ಇಲ್ಲ ಅನ್ನುವ ಹಾಗಿಲ್ಲ. ಯಾಕೆಂದ್ರೆ ಈ ಸಿನಿಮಾದಲ್ಲಿ ನೆತ್ತೆರ್‌ ಗಿಂತ ಹೆಚ್ಚಾಗಿ ಪ್ರಾಣಕ್ಕೆ ಪ್ರಾಣ ಕೊಡುವ ಸ್ನೇಹಿತರ ನಡುವಿನ ಭಾವನಾತ್ಮಕ ಸಂಬಂಧವಿದೆ. ನವಿರಾದ ಪ್ರೀತಿಯಿದೆ. ಯಾವುದೇ ಡೈಲಾಗ್‌ ನಲ್ಲಿ ಅಶ್ಲೀಲ, ಅಸಂಬದ್ಧಕ್ಕೆ ಆಸ್ಪದವಿಲ್ಲ. ಹೀಗಾಗಿ ಈ ವೀಕೆಂಡ್‌ ನಲ್ಲಿ ನೀವು ಮಿಸ್‌ ಮಾಡ್ದೇ ಈ ಸಿನಿಮಾ ನೋಡಬಹುದು. ಶುಕ್ರವಾರ ತೆರೆಕಂಡಿರುವ ಅಸ್ತ್ರ ಪ್ರೊಡಕ್ಷನ್ಸ್‌ ಲಾಂಛನದಡಿಯಲ್ಲಿ ತಯಾರಾದ ಕೆ.ಎಸ್.ಲಂಚುಲಾಲ್‌ ನಿರ್ಮಾಣ ಮಾಡಿರುವ ನೆತ್ತೆರೆಕೆರೆ ಸಿನಿಮಾ 2000-2005ನೇ ವರ್ಷದಲ್ಲಿ ನಡೆಯುವ ಕಥೆಯಾದ್ದರಿಂದ ಸಿನಿಮಾದಲ್ಲಿ ಕಂಡುಬರುವ ಎಲ್ಲ ವಸ್ತುಗಳು ಮತ್ತು ಸನ್ನಿವೇಶಗಳನ್ನು ಅಂದಿನ ಕಾಲಕ್ಕೆ ತಕ್ಕಂತೆ ಕಟ್ಟಿಕೊಡಲಾಗಿದೆ. ಇದರಿಂದಾಗಿ ಸಿನಿಮಾ ತುಂಬಾ ರಿಚ್‌ ಆಗಿದೆ. ಇನ್ನು ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಮಾಡಿ ನಾಯಕನ ಪಾತ್ರದಲ್ಲಿ ನಟಿಸಿರುವ ಸ್ವರಾಜ್‌ ಶೆಟ್ಟಿ ಶ್ರಮ ಪ್ರತೀ ಪಾತ್ರದಲ್ಲೂ ಎದ್ದು ಕಾಣಿಸುತ್ತೆ. ಅಚ್ಚುಕಟ್ಟಾಗಿ ಎಲ್ಲ ದೃಶ್ಯವನ್ನೂ ಎಕ್ಸಲೆಂಟ್‌ ಆಗಿ ಪ್ರೇಕ್ಷಕನ ಮುಂದಿಟ್ಟಿರುವ ಸ್ವರಾಜ್‌ ಗೆ ಮುಂದೆ ಇನ್ನಷ್ಟು ಅವಕಾಶಗಳು ಹುಡುಕಿಕೊಂಡು ಬರುವುದು ನಿಶ್ಚಿತ ಅನ್ನಬಹುದು. ಸಿನಿಮಾದ ಇನ್ನೊಂದು ಪ್ಲಸ್‌ ಪಾಯಿಂಟ್‌ ಕೆಮರಾ, ಸಾಹಸ ದೃಶ್ಯಗಳು ಮತ್ತು ಬಿಜಿಎಂ.


ಇನ್ನು ತುಳುವರೇ ಆಗಿರುವ ಖ್ಯಾತ ನಟ ಸುಮನ್‌ ತಲ್ವಾರ್‌ ಈ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. ಅವರ ಲುಕ್‌, ಡೈಲಾಗ್‌ ಎಲ್ಲವೂ ಸೂಪರ್.‌ ನಟಿ ದಿಶಾಲಿ ಪೂಜಾರಿಗೆ ಮೊದಲ ಚಿತ್ರವಾದರೂ ಸಹಜವಾಗಿ ನಟಿಸಿ ಗಮನ ಸೆಳೆಯುತ್ತಾರೆ. ಇನ್ನು ಉತ್ಸವ್‌ ವಾಮಂಜೂರ್‌, ಯುವ ಶೆಟ್ಟಿ, ಚಂದ್ರಶೇಖರ ಸಿದ್ದಕಟ್ಟೆ, ಮನೀಶ್‌ ಶೆಟ್ಟಿ ನಟನೆ ಸಖತ್ತಾಗಿದೆ. ನಮಿತಾ ಕೂಳೂರು, ಪುಷ್ಪರಾಜ್‌ ಬೊಳ್ಳಾರ್‌, ಅನಿಲ್‌ ಉಪ್ಪಳ, ಲಂಚುಲಾಲ್‌ ಕೆ.ಎಸ್.‌, ಭವ್ಯಾ ಪೂಜಾರಿ ಪಾತ್ರಗಳು ನೆನಪಲ್ಲಿ ಉಳಿಯುತ್ತೆ. ಇನ್ನು ಸಿನಿಮಾದಲ್ಲಿ ಹಾಸ್ಯಕ್ಕೆ ಜಾಸ್ತಿ ಪ್ರಾಧಾನ್ಯತೆ ಇರದಿದ್ದರೂ ಅಲ್ಲಲ್ಲಿ ಪಾತ್ರಗಳೇ ನಗೆ ತರಿಸುತ್ತವೆ. ತುಳು ಭಾಷೆಯಲ್ಲಿ ಕಾಮಿಡಿ ಸಿನಿಮಾಗಳು ಮಾತ್ರ ಬರುತ್ತೆ, ಕಂಟೆಂಟ್‌ ಓರಿಯೆಂಟೆಡ್‌ ಸಿನಿಮಾಗಳು ಬರಲ್ಲ ಎಂಬ ಮಾತನ್ನು 150ನೇ ಸಿನಿಮಾ ನೆತ್ತೆರೆಕೆರೆ ಸುಳ್ಳು ಮಾಡಿದೆ. ಇದು ಪ್ರತಿಭಾವಂತ ಕಲಾವಿದರ ಗುಂಪೊಂದು ಕಷ್ಟಪಟ್ಟು ಮಾಡಿರುವ ಸಿನಿಮಾ ಅದಕ್ಕಾಗಿ ನಿರ್ಮಾಪಕರು ಸಾಕಷ್ಟು ದುಡ್ಡನ್ನೂ ಹಾಕಿದ್ದಾರೆ. ಆದ್ದರಿಂದ ತುಳುವರು ಯಾವುದೇ ಕಾರಣಕ್ಕೂ ಮಿಸ್‌ ಮಾಡ್ದೇ ಈ ಸಿನಿಮಾ ನೋಡಿಬನ್ನಿ. ತುಳು ಭಾಷೆಯಲ್ಲಿ ಬಂದಿರುವ ರೆಟ್ರೋ, ಸಸ್ಪೆನ್ಸ್‌ ಥ್ರಿಲ್ಲರ್‌, ಆಕ್ಷನ್‌ ಸಿನಿಮಾ ಇದಾಗಿದ್ದು ಖಂಡಿತಾ ನಿಮಗೆ ಇಷ್ಟವಾಗುವುದರಲ್ಲಿ ನೋ ಡೌಟ್!

error: Content is protected !!