ಕಂದಾವರ ಗ್ರಾ.ಪಂ. ಮುಂದುವರಿದ ಆಡಳಿತ-ವಿರೋಧ ಪಕ್ಷ ವಾಕ್ಸಮರ!

ಮಂಗಳೂರು: ಕಂದಾವರ ಗ್ರಾಮ ಪಂಚಾಯತ್‌ ಆಡಳಿತದ ಕುರಿತು ಪರ-ವಿರೋಧದ ಆರೋಪ – ಪ್ರತ್ಯಾರೋಪಗಳು ಮುಂದುವರೆದಿವೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್‌ ಬೆಂಬಲಿತ ಮಾಜಿ ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ ಆಡಳಿತ ನಡೆಸುತ್ತಿರುವ ಬಿಜೆಪಿ ಬೆಂಬಲಿತ ಸದಸ್ಯರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಪಂಚಾಯತ್‌ನ ಪ್ರಸ್ತುತ ಆಡಳಿತವು ಸ್ಪಷ್ಟನೆ ನೀಡಿದ್ದು, ಕೆಲವೊಂದು ಗಂಭೀರ ಆರೋಪಗಳನ್ನು ಮಾಡಲಾಗಿದೆ.

ಮಾಜಿ ಅಧ್ಯಕ್ಷೆಯ ಆರೋಪವೇನಿತ್ತು?

ಆಗಸ್ಟ್‌ 13ರಂದು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಜಿಪಂ ಮಾಜಿ ಸದಸ್ಯ ಯು.ಪಿ. ಇಬ್ರಾಹೀಂ, ಸುನಿತಾ ಅದ್ಯಪಾಡಿ, ಮಾಲತಿ ಅವರೊಂದಿಗೆ ಕೂತು ಸುದ್ದಿಗೋಷ್ಠಿ ನಡೆಸಿದ್ದ ಕಂದಾವರ ಪಂಚಾಯತ್‌ ಮಾಜಿ ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ ಅವರು ಆಡಳಿತ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

“2018ರಲ್ಲಿ ಕೊಳಂಬೆ ಗ್ರಾಮದ ಕೌಡೂರು ಸರ್ವೇ ನಂ. 135/3 ರಲ್ಲಿ ಒಟ್ಟು 189 ಹಕ್ಕುಪತ್ರಗಳನ್ನು ಅಂದಿನ ಶಾಸಕ ಮೊದಿನ್ ಬಾವಾ ಅವರ ಸಮ್ಮುಖದಲ್ಲಿ ವಿತರಿಸಿದ್ದೆವು.   ಜನರಿಗೆ ಮನೆ ಕಟ್ಟಿಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ,” ಎಂದು ಆರೋಪ ಮಾಡಿದ್ದರು.

ಅವರು ಮುಂದುವರಿಸಿದ್ದ ಅವರು, “ಈ ಅವಧಿಯಲ್ಲಿ ಮೂವರು ಪರಿಶಿಷ್ಟ ಜಾತಿಯ ಪಂಪು ಚಾಲಕರನ್ನು ಕೆಲಸದಿಂದ ವಜಾ ಮಾಡಿದ್ದಾರೆ.

ಅಲ್ಲದೆ “ಕೊಳಂಬೆ ಗ್ರಾಮದ ಸೌಹಾರ್ದನಗರದ ನಿವಾಸಿಗಳು ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ನಿರ್ವಸಿತರಾಗಿದ್ದಾರೆ.   ವಸತಿ ಸಮುಚ್ಛಯ ನಿರ್ಮಾಣವಾಗಿರುವ ಪ್ರದೇಶದ ಎದುರು ಇರುವ ಸರ್ಕಾರಿ ಜಾಗವನ್ನು  ಅತಿಕ್ರಮಣ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಬಿಜೆಪಿ ಬೆಂಬಲಿತರ ವಿರುದ್ಧ ಗಂಭೀರ ಆರೋಪ ಹೊರಿಸಿದ್ದರು.

ಅವರ ಪ್ರಕಾರ, ಕೊಳಂಬೆ ಗ್ರಾಮದ ಉಳ್ಳಗುಡ್ಡೆ ಪ್ರದೇಶದಲ್ಲಿ  ಗ್ರಾಮಸ್ಥರು ನೀರಿಗಾಗಿ ಪರಸ್ಪರ ಜಗಳವಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ದೂರಿದ್ದರು.

ಪಂಚಾಯತ್‌ ಆಡಳಿತ ಪ್ರತಿಕ್ರಿಯೆ:

ಇದಕ್ಕೆ ಪ್ರತಿಯಾಗಿ ಪಂಚಾಯತ್‌ ಆಡಳಿತ ಇಂದು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ್ದಾರೆ.

ಉಪಾಧ್ಯಕ್ಷ ಉದಯ ಆರ್ ರಾವ್ ಮಾತನಾಡಿ, “2018ರಲ್ಲಿ ಹಕ್ಕುಪತ್ರದ ಜೆರಾಕ್ಸ್ ಪ್ರತಿಗಳನ್ನು ಮಾತ್ರ ವಿತರಿಸಲಾಗಿತ್ತು. ನಿಜವಾದ ನಿವೇಶನ ಹಂಚಿಕೆ ಆಗಿರಲಿಲ್ಲ. ಅದೇ ಸಂದರ್ಭದಲ್ಲಿ ಆಡಳಿತ ನಡೆಸಿದ್ದು, ಈಗ ಆರೋಪ ಮಾಡುವವರೇ. ಆದರೆ ಪ್ರಸ್ತುತ ಆಡಳಿತ ಅಧಿಕಾರಕ್ಕೆ ಬಂದ ಬಳಿಕ ನಿವೇಶನಗಳನ್ನು ಸಮತಟ್ಟು ಮಾಡಿ, ರಸ್ತೆ, ಕುಡಿಯುವ ನೀರು, ಪೈಪ್‌ಲೈನ್‌, ಕೊಳವೆ ಬಾವಿ, ಟ್ಯಾಂಕ್‌ ಮೊದಲಾದ ಮೂಲಸೌಕರ್ಯ ಒದಗಿಸಲಾಗಿದೆ,” ಎಂದು ಆಡಳಿತವು ಸ್ಪಷ್ಟಪಡಿಸಿದೆ. ಈ ಮೂಲಕ ಮಾಜಿ ಶಾಸಕ ಮೊಯ್ದೀನ್‌ ಬಾವಾ ವಿತರಿಸಿದ್ದ ಹಕ್ಕುಪತ್ರಗಳು ಜೆರಾಕ್ಸ್‌ ಕಾಪಿಗಳಾಗಿದ್ದವು ಎನ್ನುವ ಗಂಭೀರ ಆರೋಪ ಮಾಡಿದ್ದಾರೆ.

ಶಾಸಕರ ಅನುದಾನದಿಂದ 13 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದ್ದು, ಈಗಾಗಲೇ ಸುಮಾರು 80 ನಿವೇಶನಗಳ ಗಡಿಗುರುತು ಮಾಡಲಾಗಿದೆ. ಉಳಿದ ನಿವೇಶನಗಳ ಗುರುತು ಮಾಡುವಲ್ಲಿ ಮಳೆಯ ಅಡಚಣೆ ಉಂಟಾಗಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದೆ.

​ವಸತಿ ಸಮುಚ್ಛಯ ನಿರ್ಮಾಣಕ್ಕೆ ಸಂಬಂಧಿಸಿದಂತೆ, “ಜಾಗದ ಮಾಲಕರು ದಾನಪತ್ರದ ಮೂಲಕ ಉದ್ಯಾನವನಕ್ಕೆ ಜಾಗ ಮೀಸಲು ಮಾಡಿದ್ದಾರೆ. ಸರ್ಕಾರದ ಸ್ವಾಮ್ಯದ ಸ್ವಲ್ಪ ಜಾಗಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿ, ತಹಶೀಲ್ದಾರರು ಅಭಿಪ್ರಾಯ ಕೇಳಿದ್ದಾರೆ. ಬಹುಮತದ ನಿರ್ಣಯದಂತೆ ತಾತ್ಕಾಲಿಕವಾಗಿ ಉದ್ಯಾನವನ ಮಾಡಲು ನಿರ್ಧಾರ ಮಾಡಲಾಗಿದೆ. ಮುಂದೆ ಪಂಚಾಯತ್‌ನ ಅಗತ್ಯಕ್ಕಾಗಿ ಮಾತ್ರ ಬದಲಾವಣೆ ಸಾಧ್ಯವಾಗಲಿದೆ,” ಎಂದು ಆಡಳಿತ ತಿಳಿಸಿದೆ.

ಕೊಳಂಬೆ ಉಳ್ಳಗುಡ್ಡೆಯಲ್ಲಿ ನೀರಿನ ಹಂಚಿಕೆ ಕುರಿತು, “ಪಂಚಾಯತ್‌ನಿಂದ ನೀರಿಗಾಗಿ ಯಾವುದೇ ಹೊಡೆದಾಟ ನಡೆದಿಲ್ಲ. ಕೆಲವರು ತಮ್ಮ ಖಾಸಗಿ ಜಾಗದಲ್ಲಿ ಪೈಪ್‌ ಅಳವಡಿಸುವ ಸಂದರ್ಭದಲ್ಲಿ ಜಾಗದ ಮಾಲಿಕರು ಪ್ರಶ್ನಿಸಿದ್ದು, ವೈಯಕ್ತಿಕ ಕಲಹವಾಗಿ ಹಲ್ಲೆ ನಡೆದಿದೆ. ಇದನ್ನು ಪಂಚಾಯತ್ ಮೇಲೆ ಆರೋಪಿಸುವುದು ತಪ್ಪು,” ಎಂದು ಸ್ಪಷ್ಟನೆ ನೀಡಿದೆ.

ಪಂಚಾಯತ್‌ ಆಡಳಿತದ ಪ್ರಕಾರ, “ಕಂದಾವರ ಪಂಚಾಯತ್ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಲು ಬದ್ಧವಾಗಿದೆ. ಸುಳ್ಳು ಆರೋಪಗಳನ್ನು ಮಾಡುತ್ತಾ ಜನರಲ್ಲಿ ಗೊಂದಲ ಸೃಷ್ಟಿಸುವುದು ದುರುದ್ದೇಶಪೂರ್ಣ,” ಎಂದು ತಿಳಿಸಿದೆ.

ಅಧ್ಯಕ್ಷೆ ಶಾಲಿನಿ ಎಸ್., ಅಮೃತ್ ಲಾಲ್ ಜಾಯ್ ಡಿಸೋಜ, ಶೋಧನ್, ಉಮೇಶ್ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.

ಕಂದಾವರ ಗ್ರಾಮ ಪಂಚಾಯತ್‌ನ ಆಡಳಿತದ ಬಗ್ಗೆ ಮುಂದುವರಿಯುತ್ತಿರುವ ಈ ಪರ-ವಿರೋಧದ ಆರೋಪ-ಪ್ರತಾರೋಪಗಳ ಬಗ್ಗೆ ಬಿರುಸಿನ ಚರ್ಚೆ ಆರಂಭವಾಗಿದೆ. ಇದು ಮುಂದೆ ಯಾವ ಹಂತಕ್ಕೆ ತಲುಪಲಿದೆ ಎನ್ನುವುದು ಕುತೂಹಲ ಮೂಡಿದೆ.

ಕಂದಾವರ ಪಂಚಾಯತ್‌ ಆಡಳಿತದ ವಿರುದ್ಧ ಮಾಜಿ ಅಧ್ಯಕ್ಷೆ ಕೆಂಡಾಮಂಡಲ

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಕಾರ್ ಖರೀದಿಯ ನಿಮ್ಮ ಕನಸು ನನಸಾಗಬೇಕೇ? ಇಲ್ಲಿದೆ ಒಂದು ಸುವರ್ಣಾವಕಾಶ! ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ🔰

error: Content is protected !!