ಕೇರಳ: ಕರ್ನಾಟಕದ ಯುವಕನೊಬ್ಬ ಕೇರಳದ 13 ವರ್ಷದ ಬಾಲಕಿಯನ್ನು ಸ್ನ್ಯಾಪ್‌ಚಾಟ್‌ನಲ್ಲಿ ಪರಿಚಯ ಮಾಡಿಕೊಂಡು ಪ್ರೀತಿಸುವ ನಾಟಕ ಮಾಡಿ ಕೇರಳದ ಕೋಝಿಕ್ಕೋಡ್ ಕೊಯಿಲಾಂಡಿ ಬಳಿ ಅತ್ಯಾಚಾರ ಎಸಗಿದ್ದಾನೆ. ಸೈಬರ್ ಸೆಲ್ ನೆರವು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಕೇರಳ ಪೊಲೀಸರು ಆರೋಪಿ ಮೊಹಮ್ಮದ್ ಸಹೀರ್‌ನನ್ನು ಬಂಧಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಕೂಡ ವೈಯಕ್ತಿಕವಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಆದರೆ, ಮೊಬೈಲ್‌ನಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸುವಾಗ ಯಾರು ವಂಚಕರು ಎಂಬುದನ್ನು ಅರಿಯಲಾಗದೇ ಮೋಸಕ್ಕೆ ಒಳಗಾಗುತ್ತಾರೆ. ಇಲ್ಲೊಬ್ಬ ಕರ್ನಾಟಕದ ಯುವಕ, ಕೇರಳದ 13 ವರ್ಷದ ಬಾಲಕಿಯನ್ನು ಸ್ನ್ಯಾಪ್‌ಚಾಟ್‌ನಲ್ಲಿ ಪರಿಚಯ ಮಾಡಿಕೊಂಡು, ಪ್ರೀತಿಸುವ ನಾಟಕ ಮಾಡಿದ್ದಾನೆ. ನಂತರ, ಬಾಲಕಿಯನ್ನು ಭೇಟಿ ಮಾಡುವುದಕ್ಕೆಂದು ತೆರಳಿ, ಅಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
ಸೈಬರ್ ಸೆಲ್ ನೆರವು ಮತ್ತು ಹಲವು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ವಡಕರ ಡಿವೈಎಸ್ಪಿ ಹರಿಪ್ರಸಾದ್ ನೇತೃತ್ವದಲ್ಲಿ ಕೊಯಿಲಾಂಡಿ ಸಿಐ ಶ್ರೀಲಾಲ್, ಎಸ್‌ಐ ಬಿಜು, ಎಎಸ್‌ಐ ವಿಜು, ಶೋಭಾ, ಸಿವಿಲ್ ಪೊಲೀಸ್ ಅಧಿಕಾರಿಗಳಾದ ನಿಖಿಲ್, ಪ್ರವೀಣ್ ಕುಮಾರ್, ಗಂಗೆಶ್ ಮುಂತಾದವರ ತಂಡ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೊಹಮ್ಮದ್ ಸಹೀರ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.