ಉಡುಪಿ: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಬಿ ಎಲ್ ಸಂತೋಷ್ ಅವರಿಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಕಾರಣಕ್ಕೆ ಗುರುವಾರ ತಿಮರೋಡಿಯವರನ್ನು ವಶಕ್ಕೆ ಪಡೆದಿದ್ದ ಬ್ರಹ್ಮಾವರ ಪೊಲೀಸರು ಬ್ರಹ್ಮಾವರ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಪ್ರಥಮ ದರ್ಜೆ ದಂಡಾಧಿಕಾರಿಯವರ ನ್ಯಾಯಾಲಯ ಉಡುಪಿ ಸಂಚಾರಿ ಪೀಠಕ್ಕೆ ಹಾಜರುಪಡಿಸಿದ್ದು, ವಾದ ಪ್ರತಿವಾದದ ಬಳಿಕ ತಿಮರೋಡಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.