ಭಟ್ಕಳ: ನಗರದ ಬಸ್ ನಿಲ್ದಾಣದ ಸಮೀಪ ತಾಲೂಕಾ ಪಂಚಾಯತ್ ಮುಂಭಾಗದ ರಾ.ಹೆ.66 ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರನೋರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಿಂಬದಿಯಲ್ಲಿ ಪ್ರಯಾಣ ಮಾಡುತ್ತಿದ್ದ ಅವರ ಪತ್ನಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ (ಆ.23) ಸಂಭವಿಸಿದೆ.
ಬಸ್ತಿಯ ನಿವಾಸಿ ಈಶ್ವರ ನಾಯ್ಕ (61) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ. ಭಾರತಿ ಈಶ್ವರ ನಾಯ್ಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ.
ಶನಿವಾರ ಬೆಳಿಗ್ಗೆ ಬಸ್ತಿಯಿಂದ ಭಟ್ಕಳ ನಗರದ ಕಡೆಗೆ ಕಾರ್ಯಕ್ರಮವೊಂದಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ಎದುರುಗಡೆಯಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಈಶ್ವರ ನಾಯ್ಕ ಟ್ಯಾಂಕರ್‌ನ ಎದುರಗಡೆಯ ಚಕ್ರಕ್ಕೆ ಸಿಲುಕಿದ್ದು ಹೆಲ್ಮೆಟ್ ಪುಡಿಯಾಗಿ ಆತನ ತಲೆ ಸಂಪೂರ್ಣ ಜಜ್ಜಿಹೋಗಿದೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
ಅದೃಷ್ಟವಶಾತ್ ಬೈಕಿನಿಂದ ಹೊರಕ್ಕೆ ಬಿದ್ದ ಆತನ ಪತ್ನಿ ಗಾಯಗೊಂಡು ಜೀವಾಪಾಯದಿಂದ ಪಾರಾಗಿದ್ದಾರೆ.