ಚಿನ್ನಯ್ಯನನ್ನು ಬಂಧಿಸಿದ್ದು ಒಳ್ಳೆದಾಯಿತು, ಅದನ್ನು ನಾವು ಸ್ವಾಗತ್ತಿಸುತ್ತೇವೆ : ಗಿರೀಶ್‌ ಮಟ್ಟಣ್ಣನವರ್‌

ಮಂಗಳೂರು: ಚಿನ್ನಯ್ಯನನ್ನು ಬಂಧಿಸಿದ್ದು ಒಳ್ಳೆದಾಯಿತು.ಆತನಿಗೆ ನಾರ್ಕೋ ಆನಾಲಿಸಿಸ್‌ ಪರೀಕ್ಷೆ ಮಾಡಬೇಕು ಎಂದು ಗಿರೀಶ್‌ ಮಟ್ಟಣ್ಣನವರ್‌ ತಿಳಿಸಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಗಿರೀಶ್ ಮಟ್ಟಣ್ಣವರ್ ಸೇರಿದಂತೆ ಮೂವರ ವಿರುದ್ಧ ದಕ್ಷಿಣ ಕನ್ನಡದ ಜಿಲ್ಲೆಯ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ಸಂಬಂಧ ವಿಚಾರಣೆ ಎದುರಿಸಲು ಇಂದು ಪೊಲೀಸ್​ ಠಾಣೆಗೆ ಗಿರೀಶ್ ಮಟ್ಡಣ್ಣನವರ್ ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚಿನ್ನಯ್ಯನನ್ನು ಬಂಧಿಸಿದ್ದನ್ನು ನಾವೂ ಸ್ವಾಗತ್ತಿಸುತ್ತೇವೆ. ಅರೆಸ್ಟ್‌ ಮಾಡಿರುವಂತಹದ್ದು ಒಳ್ಳೆಯ ಬೆಳವಣಿಗೆ, ಆತನಿಗೆ ಬರೀ ಅರೆಸ್ಟ್‌ ಮಾತ್ರವಲ್ಲದೆ ನಾರ್ಕೋ ಆನಾಲಿಸಿಸ್‌ ಪರೀಕ್ಷೆ ಮಾಡಬೇಕು. ಇದರಲ್ಲಿ ಏನೇ ಷಡ್ಯಂತ್ರಗಳಿದ್ದರೂ ಅದನ್ನ ಐಟಿಯವರೇ ಉತ್ತರ ಕೊಡುತ್ತಾರೆ. ಎಸ್‌ಐಟಿ ಕರೆದರೆ ನನಗೆ ಮತ್ತು ಆತನಿಗೆ ಏನು ಸಂಬಂಧ ಇದೆ ಎನ್ನುವುದನ್ನು ತಿಳಿಸುತ್ತೇನೆ ಎಂದು ಹೆಳಿದ್ದಾರೆ.

ಎಸ್ಐಟಿ ತನಿಖೆಯ ಬಗ್ಗೆ ಸಾರ್ವಜನಿಕರು ಯಾರೂ ತಪ್ಪಾಗಿ ಮಾತಾಡಬಾರದು. ಎಸ್ಐಟಿ ತನ್ನ ಪಾಡಿಗೆ ತನಿಖೆ ಮಾಡಲು ಬಿಡಬೇಕು. ಸುಜಾತ ಭಟ್ ಪ್ರಕರಣವನ್ನೂ ಎಸ್ಐಟಿ ತನಿಖೆ ಮಾಡುತ್ತೆ ಎಂದು ಗಿರೀಶ್ ಮಟ್ಟಣ್ಣನವರ್​ ಹೇಳಿಕೆ ನೀಡಿದ್ದಾರೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19

error: Content is protected !!