ಮಂಗಳೂರು: ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಮುಸ್ಲಿಂ ಲೀಗ್, ಪಿಎಫ್‌ಐಯ ಷಡ್ಯಂತ್ರವಿದೆ. ಇದನ್ನು ಬೇರೆ ಯಾರೂ ಬಾಯಿ ಬಿಟ್ಟಿಲ್ಲ ನಾನು ಬಾಯಿ ಬಿಟ್ಟಿದ್ದೇನೆ. ಬೇಕಾದರೆ ನನ್ನ ಮೇಲೆ ಕೇಸ್ ಹಾಕಿ ನೋಡ್ತೇನೆ. ಐ ಚಾಲೆಂಜ್ಡ್, ನೋ ಫಿಯರ್ ಸತ್ಯವನ್ನು ಹೇಳಲು ದೇವರು ನಮಗೆ ಜನ್ಮ ಕೊಟ್ಟಿದ್ದಾನೆ. ಬದುಕಿದಾಗ ಸಾಯ್ಬಾರ್ದು, ಸತ್ತ ಮೇಲೂ ಬದುಕಬೇಕಾದರೆ ಸತ್ಯದ ಮೇಲೆ ನಿಲ್ಲಬೇಕು ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಹೇಳಿದ್ದು, ಪ್ರಕರಣದ ಕುರಿತು ಇಡಿ, ಎನ್‌ಐಎ ತನಿಖೆಗೆ ಆಗ್ರಹಿಸಿದ್ದಾರೆ.
ಅವರು ಮಂಗಳೂರಿನ ಪುರಭವನದಲ್ಲಿ ನಡೆಯುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳವನ್ನು ಗುರಿಯಾಗಿಸಿ ನಡೆಯುತ್ತಿರುವ ಅಪಪ್ರಚಾರಗಳನ್ನು ಖಂಡಿಸಿ, ದಕ ಜಿಲ್ಲಾ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯ ವತಿಯಿಂದ ನಡೆದ ʼಧರ್ಮ ತೇಜೋ ಬಲಂ ಬಲಂʼ ಧರ್ಮಜಾಗೃತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಇತ್ತೀಚೆಗೆ ಮಂಗಳೂರಿನಲ್ಲಿ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ವಿಚಾರವಾಗಿ ಸಂಘನಿಕೇತನದ ವಿಚಾರ ಬಂತು. ಆದರೆಆರೋಪಿ ಇಡಿಯವರಲ್ಲಿ ಏನು ಹೇಳಿದ? ಅವನಿಗೆ ದುಡ್ಡು ಎಲ್ಲಿಂದ ಬರುತ್ತೆ ಬರುತ್ತೆ ಅಂದ. ಧರ್ಮಸ್ಥಳ ಕ್ಷೇತ್ರಕ್ಕೆ ಬಾಂಬ್ ಹಾಕುವುದು ನನ್ನ ಉದ್ದೇಶವಾಗಿತ್ತು ಎಂದು ಹೇಳಿದ. ಏನು ಹೇಳ್ತೀರಿ ಇದಕ್ಕೆ ಅಂತ ಪ್ರಶ್ನಿಸಿದ ಅವರು, ಯಾವ ಉದ್ದೇಶ ಅಂತ ನಮಗೆ ಇನ್ನೂ ಅರ್ಥ ಆಗ್ಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯನ್ನು ಮಲಪ್ಪುರಂ ಜಿಲ್ಲೆ ಮಾಡ್ಬೇಕೆಂಬ ಷಡ್ಯಂತ್ರ ಕೇರಳದಲ್ಲಿ ಆಗ್ತಾ ಇದೆ ಎಂದರು.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭ ಇದನ್ನು ನಾನು ಎತ್ತಿದ್ದೆ. ಕೇರಳದ ಒಂದು ಇಂಗ್ಲೀಷ್ ಪತ್ರಿಕೆ ಇದರ ಒಂದು ಸಿಂಪ್ಟಮನ್ನು ಮೊದಲೇ ಕೊಟ್ಟಿತ್ತು. ಅಲ್ಲಿಯ ಕೇರಳದ ಕಾಂಗ್ರೆಸ್ ಅಧ್ಯಕ್ಷ ಎಮೆನ್ ಹಸನ್ ಅವನತ್ರ ಕೇರಳದ ಮುಖ್ಯಮಂತ್ರಿ ಪಿನರಾಯ್ ಇದರ ಬಗ್ಗೆ ಪ್ರಶ್ನೆಯನ್ನು ಎತ್ತಿದಾಗ ಅವನು ಬಾಯಿ ಮುಚ್ಚಿದ. ನಮಗೆ ಮಾತಾಡಲು ಹೈಕಮಾಂಡ್ ಆದೇಶವಾಗಿಲ್ಲ ಎಂದಿದ್ದ. ಇಲ್ಲಿ ನಿಜವಾದ ಭಾರತೀಯ ಮುಸ್ಲಿಮರು ಬಂದಿದ್ದಾರೆ. ಪಾಕಿಸ್ತಾನ ಪ್ರೇರಿತ ಮುಸ್ಲಿಮರು ಇಲ್ಲಿಗೆ ಬರುವುದಿಲ್ಲ. ನಾನು ಭಾಷಣ ಮಾಡಿದ್ರಿಂದ ಪ್ರಯೋಜನವಿಲ್ಲ. ನಮಗೆ ವಸ್ತುಸ್ಥಿತಿ, ನ್ಯಾಯ ಬೇಕಾಗಿದೆ. ಜಸ್ಟೀಸ್ ಬೇಕಾಗಿದೆ ಎಂದರು.
ಕರ್ನಾಟಕದ ಮೂಲೆ ಮೂಲೆಯಲ್ಲಿ ಧರ್ಮಸ್ಥಳದಿಂದ ಗ್ರಾಮಾಭಿವೃದ್ಧಿ ಯೋಜನೆ ನಡೆಯುತ್ತಿದ್ದು, ಕೋಟ್ಯಂತರ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯಾಗಿದೆ. ಅನೇಕ ಮಕ್ಕಳಿಗೆ ವಿದ್ಯಾಭ್ಯಾಸ ಅವಕಾಶ ಆಗಿದೆ. ಈ ಧರ್ಮಸ್ಥಳವನ್ನು ನಿರ್ನಾಮ ಮಾಡಿದರೆ ನಮಗೆ ಇಲ್ಲಿ ಕಾಲಿಡಲು ಸಾಧ್ಯವಾಗುತ್ತದೆ ಎಂಬುದು ಅವರ ಉದ್ದೇಶ. ಇದರ ಹಿಂದೆ ಮುಸ್ಲಿಂ ಲೀಗ್, ಪಿಎಫ್‌ಐಯ ಷಡ್ಯಂತ್ರವಿದೆ. ಬೇರೆ ಯಾರೂ ಇದನ್ನು ಬಾಯಿ ಬಿಟ್ಟಿಲ್ಲ ನಾನು ಬಾಯಿ ಬಿಟ್ಟಿದ್ದೇನೆ ಬೇಕಾದರೆ ನನ್ನ ಮೇಲೆ ಕೇಸ್ ಹಾಕಿ ನೋಡ್ತೇನೆ. ಈ ಚಾಲೆಂಜ್ಡ್, ನೋ ಫಿಯರ್ ಸತ್ಯವನ್ನು ಹೇಳಕಲು ದೇವರು ನಮಗೆ ಜನ್ಮ ಕೊಟ್ಟಿದ್ದಾನೆ. ಬದುಕಿದಾಗ ಸಾಯ್ಬಾರ್ದು, ಆದರೆ ಸತ್ತ ಮೇಲೂ ಬದುಕಬೇಕಾದರೆ ಸತ್ಯದ ಮೇಲೆ ನಿಲ್ಲಬೇಕು, ಹಾಗಾಗಿ ಈ ಪ್ರಕರಣದ ಎನ್‌ಐಎ, ಇಡಿ ತನಿಖೆ ನಡೆಯಬೇಕು ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.