ಕಡಬ ಪ.ಪಂ. ಚುನಾವಣೆಯಲ್ಲಿ ಬಿಜೆಪಿಯವರು ಹಣ, ಹೆಂಡ ಹಂಚಿದ್ದಾರೆ: ಹರೀಶ್‌ ಕುಮಾರ್

ಮಂಗಳೂರು: ಹಣ, ಹೆಂಡ ಹಂಚಿದ ಕಾರಣ ಕಡಬ ಪ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿಗೆ ಎಂಬ ಆರೋಪ ಬಿಜೆಪಿಯವರಿಂದ ಕೇಳಿ ಬಂದಿದೆ. ಆದರೆ ವಾಸ್ತವದಲ್ಲಿ ಹಣ ಹಂಚಿದ್ದು ಬಿಜೆಪಿಯವರು. ಚುನಾವಣಾ ದಿನ ಕಾರ್ಯಕರ್ತರು ಬೂತ್‌ನಲ್ಲಿದ್ದ ವೇಳೆ ನಾಲ್ಕು ವಾರ್ಡ್‌ಗಳಲ್ಲಿ ಬಿಜೆಪಿಯವರು ಹಣ ಹಂಚಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆಲುವಿಗೆ ಪಕ್ಷದ ನಾಯಕರ ಒಗ್ಗಟ್ಟಿನ ಹೋರಾಟದ ಜತೆಗೆ ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳು ಕಾರಣವಾಗಿವೆ ಎಂದರು

ಚುನಾವಣಾ ದಿನ ಕಾರ್ಯಕರ್ತರು ಬೂತ್‌ನಲ್ಲಿದ್ದ ವೇಳೆ ನಾಲ್ಕು ವಾರ್ಡ್‌ಗಳಲ್ಲಿ ಬಿಜೆಪಿಯವರು ಹಣ ಹಂಚಿದ ಕಾರಣ ಅವರು ಎರಡು ವಾರ್ಡಗಳನ್ನು ಕಿತ್ತುಕೊಂಡಿದ್ದಾರೆ. ಅವರು ಮಾಡಿರುವುದನ್ನು ಕಾಂಗ್ರೆಸ್ ಮಾಡಿದೆ ಎಂದು ಹೇಳಲು ಹೊರಟಿದ್ದಾರೆ. ಮತದಾರರಿಗೆ ಈ ಬಗ್ಗೆ ಅರಿವಿದೆ ಎಂದು ಹರೀಶ್ ಕುಮಾರ್ ಹೇಳಿದರು.

ಚುನಾವಣೆಯ ಸಂದರ್ಭ ಕಾಂಗ್ರೆಸ್ ನೀಡಿರುವ ಭರವಸೆಯಂತೆ ಕಡಬ ಪಟ್ಟಣ ಪಂಚಾಯತ್‌ನ್ನು ಮಾದರಿಯಾಗಿ ರೂಪಿಸಲಾಗುವುದು. ಆದರೆ ಬಿಜೆಪಿಯವರು ಕಾಂಗ್ರೆಸ್‌ನಿಂದ ಅಭಿವೃದ್ಧಿ ಆಗುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡ ನಿರ್ಮಾಣ ಮಾತ್ರವಲ್ಲ. ಜನರ ಜೀವನ ಮಟ್ಟ ಸುಧಾರಿಸುವುದು ಕೂಡಾ ಪ್ರಮುಖ. ಪಂಚ ಗ್ಯಾರಂಟಿಗಳು ಜನರ ಜೀವನ ಮಟ್ಟ ಸುಧಾರಿಸಲು ಸಹಕಾರಿಯಾಗಿವೆ. ಈ ಗ್ಯಾರಂಟಿ ಯೋಜನೆಗಳಿಗಾಗಿ 55000 ಕೋಟಿ ರೂ. ಹಾಗೂ ಕೃಷಿ ಪಂಪ್ ಸೆಟ್‌ಗಳಿಗಾಗಿ 10000 ಕೋಟಿ ರೂ ಖರ್ಚು ಮಾಡಲಾಗುತ್ತಿದೆ ಎಂದವರು ಹೇಳಿದರು.

ಒಳ ಮೀಸಲಾತಿ ಮೂರು ದಶಕಗಳ ಹೋರಾಟವಾಗಿದ್ದು, ಸಮರ್ಪಕವಾಗಿ ಅನುಷ್ಟಾನ ಮಾಡುವ ಗೌರವ ಇದೀಗ ಕಾಂಗ್ರೆಸ್ ಪಕ್ಷಕ್ಕೆ ದೊರಕಿದೆ. ಒಳ ಮೀಸಲಾತಿ ಎಂಬುದು ಜೇನುಗೂಡಿಗೆ ಕೈಹಾಕಿದಂತೆ. ಎಲ್ಲರಿಗೂ ಸಮಾಧಾನ ಪಡಿಸುವುದು ಕಷ್ಟ. ಆದರೆ ಪಕ್ಷ ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸುವ ಕೆಲಸ ಮಾಡಿದೆ ಎಂದವರು ಹೇಳಿದರು.

ಇದನ್ನೂ ಓದಿ ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ.ಯ ಎಬಿ ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ, ಆಲುಮ್ನಿ ಮೀಟ್ 2025 ಉದ್ಘಾಟನೆ
ಪಕ್ಷ ಸಂಘಟನೆ ಪಕ್ಷದ ಮಟ್ಟದಲ್ಲಿ ನಿರಂತರ ಪ್ರಕ್ರಿಯೆ. ಸ್ಥಳೀಯ ಚುನಾವಣೆಗಳ ಸಂದರ್ಭ ಮತದಾರರು ಸರಕಾರದ ಕಾರ್ಯಕ್ರಮ, ಜನಜೀವನಕ್ಕೆ ಸ್ಪಂದನೆಯ ವಿಚಾರವನ್ನೂ ಗಮನಿಸುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಗೋಷ್ಟಿಯಲ್ಲಿ ಮುಖಂಡರಾದ ಎಂ.ಎಸ್. ಮುಹಮ್ಮದ್, ನವೀನ್ ಡಿಸೋಜಾ, ಸುಭಾಶ್ಚಂದ್ರ ಶೆಟ್ಟಿ, ಅಪ್ಪಿಲತಾ, ಶಶಿಧರ ಹೆಗ್ಡೆ, ಚಿತ್ತರಂಜನ್, ಶಾಹುಲ್ ಹಮೀದ್, ನವಾಜ್, ದಿನೇಶ್, ವಿಕಾಸ್, ನೀರಜ್‌ಪಾಲ್, ಪ್ರೇಮ್ ಬಳ್ಳಾಲ್‌ಬಾಗ್ ಮೊದಲಾದವರು ಉಪಸ್ಥಿತರಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!