ವೈಭವೋಪೇತ ಹಬ್ಬಗಳ ಆಚರಣೆಗೆ ಸರ್ಕಾರದಿಂದ ಅಡಚಣೆ ಇಲ್ಲ: ಪದ್ಮರಾಜ್

ಮಂಗಳೂರು: ದಕ್ಷಿಣ ಕನ್ನಡ, ಉಡುಪಿಯಲ್ಲಿ ಹಿಂದೂಗಳ ಹಬ್ಬ ಅಡಚಣೆ ಉಂಟು ಮಾಡುತ್ತಿದ್ದಾರೆ ಎಂದು ಇಲ್ಲಿನ ಶಾಸಕರು ಸದನದಲ್ಲಿ ವಿಚಾರ ಎತ್ತುತ್ತಾರೆ. ನಾನು ಸ್ಪಷ್ಟನೆ ಹೇಳಲು ಬಯಸುತ್ತೇನೆ, ಬಿಜೆಪಿ ಬಂಡವಾಳವೇ ಧರ್ಮದ ವಿಚಾರದಲ್ಲಿ ಅಡಚಣೆ ಮಾಡುವುದಾಗಿದ್ದು, ಅದನ್ನು ಅವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಯಾಕೆಂದರೆ ಇಲ್ಲಿ ಯಾವುದೇ ಧರ್ಮದ ಹಬ್ಬಗಳ ಆಚರಣೆಗೆ ಎಲ್ಲಿಯೂ ಯಾವ ರೀತಿಯ ತೊಂದರೆ ಇಲ್ಲ. ಆಯೋಜಕರು ಶ್ರದ್ಧಾಭಕ್ತಿಪೂರ್ವಕವಾಗಿ ವೈಭವೋಪೇತ ಹಬ್ಬಗಳನ್ನು ಆಚರಿಸಿದರೆ ರಾಜ್ಯ ಸರ್ಕಾರದಿಂದ ಯಾವುದೇ ಅಡಚಣೆ ಇಲ್ಲ ಎಂದು ಕಾಂಗ್ರೆಸ್‌ ಮುಖಂಡ ಆರ್‌ ಪದ್ಮರಾಜ್‌ ಹೇಳಿದರು.

ಅವರು ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇರುವಾಗಲೇ ಸಮಯದ ಬಗ್ಗೆ ಒಂದು ಕಾನೂನನ್ನು ತಂದಿದ್ದರು. ಅಧಿಕಾರಿಗಳ ಕೆಲಸವೇನೆಂದರೆ ಒಂದು ಕಾನೂನನ್ನು ಪಾಲನೆ ಮಾಡುವುದು. ಆದರೂ ಕೂಡಾ ಆಯಾಯ ಭೌಗೋಳಿಕಪ್ರದೇಶದಲ್ಲಿ ನಡೆಯುತ್ತಿರುವಂತಹ ಹಬ್ಬಗಳಿಗೆ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲು ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಹಿಂದೆಯೂ ಅವಕಾಶ ಕೊಟ್ಟಿತ್ತು ಮುಂದೆಯೂ ಕೊಡಲಿದ್ದಾರೆ. ಎಲ್ಲಿಯೂ ತೊಂದರೆ ಇಲ್ಲ. ಈ ಬಾರಿಯೂ ಧೈರ್ಯದಿಂದ ಹೇಳ್ತಾ ಇದ್ದೇವೆ, ಮುಂದೆ ಬರುವ ಗಣೇಶೋತ್ಸವ, ದಸರಾ ಹಬ್ಬಗಳೂ ಕೂಡ ಹಿಂದೆ ನಾವು ಯಾವ ರೀತಿ ಮಾಡ್ತಾ ಇದ್ದೇವೋ ಅದೇ ರೀತಿ ಮಾಡಲು ತೊಂದರೆ ಇಲ್ಲ ಎಂದು ಹೇಳಿದರು.

ಈ ಬಗ್ಗೆ ನಾನು ಮಂಗಳೂರು ಪೊಲೀಸ್‌ ಕಮೀಷನರ್‌ ಅವರನ್ನು ಭೇಟಿಯಾಗಿದ್ದೆ. ಕಾನೂನನ್ನು ಮೀರಿ ಮಾಡಿ ಎಂದು ಅವರು ಹೇಳಲು ಆಗುವುದಿಲ್ಲ. ಕಾನೂನಿನ ಚೌಕಟ್ಟಿನೊಳಗಡೆ ಮಾಡಿ, ಆದರೆ ಡಿಜೆಗೆ ಅವಕಾಶವಿಲ್ಲ, ಅದು ನಮ್ಮ ಸಂಸ್ಕೃತಿಯ ಚೌಕಟ್ಟು ಕೂಡ ಅಲ್ಲ. ಅದನ್ನು ನಿಷೇಧಿಸಬೇಕು ಎಂದು ಹಿಂದಿನಿಂದಲೂ ಆಗ್ರಹವಿದ್ದು, ಅದರ ಬಗ್ಗೆ ಅವರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ವಿನಹ ಬೇರೆ ಯಾವುದೇ ಆಚರಣೆಗಳಿಗೆ ಅವರು ತೊಂದರೆ ಮಾಡುವುದಿಲ್ಲ. ತೊಕ್ಕೊಟ್ಟಿನಲ್ಲಿಯೂ ಆಚರಣೆ ಆಗಿದೆ ಆದರೆ ಯಾವುದೇ ತೊಂದರೆ ಆಗಿಲ್ಲ. ಸಮಯವಾಕಾಶ 11 ಗಂಟೆ ಇದ್ದರೂ ರಾತ್ರಿ 2 ಗಂಟೆಯವರೆಗೆ ಮೆರವಣಿಗೆ ನಡೆದಿದೆ. ಯಾರಿಗೂ ತೊಂದರೆ ಮಾಡಿಲ್ಲ. ಈಗ್ಲೂ ಅಷ್ಟೆ ಕಮಿಷನರ್ ಮನವಿ ಏನೆಂದರೆ ಕಾನೂನಿನ ಪ್ರಕಾರ ನಾವು ನಡೆದುಕೊಳ್ಳುತ್ತೇವೆ, ಟೈಮಿಂಗ್ಸ್‌ ಬಗ್ಗೆ ಸಂಬಂಧಪಟ್ಟ ಪೊಲೀಸ್‌ ಇಲಾಖೆ ಅನುಮತಿ ಪಡೆಯಿರಿ, ನಿಮ್ಮ ಸಂಸ್ಕೃತಿ ಪ್ರಕಾರ ಆಚರಣೆಗೆ ನಮ್ಮ ಅಭ್ಯಂತರವಿಲ್ಲ, ಯಾವುದೇ ತೊಂದರೆಯನ್ನೂ ಕೊಡುವುದಿಲ್ಲ. ‌ ಶಾಸಕರಿಗೆ ಇಂಥಾ ವಿಚಾರ ಹಿಟ್ಟು ಬೇರೆ ವಿಚಾರದ ಕುರಿತು ಸದನದಲ್ಲಿ ಧ್ವನಿ ಎತ್ತಲಿ. ಬಿಟ್ಟು ಜನಪರ ಕೆಲಸ ಮಾಡಿ ಸಂಬಂಧೊಪಟ್ಟ ಮುಖ್ಯಮಂತ್ರಿ ಚರ್ಚಿಸಿ ಮಾಡಲು ಗಮನವಹಿಸಿ ಎಂದು ಪದ್ಮರಾಜ್ ಸೂಚಿಸಿದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!