ಉಡುಪಿ: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬ್ರಹ್ಮಾವರ ನ್ಯಾಯಾಲಯ ಆದೇಶ ನೀಡಿದೆ.
ಬ್ರಹ್ಮಾವರ ಸ್ಟೇಷನ್ ನಲ್ಲಿ ಬೇಲ್ ಸಿಗದ ಕಾರಣ ತಿಮರೋಡಿಯವರನ್ನು ಬ್ರಹ್ಮಾವರ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಪ್ರಥಮ ದರ್ಜೆ ದಂಡಾಧಿಕಾರಿಯವರ ನ್ಯಾಯಾಲಯ ಉಡುಪಿ ಸಂಚಾರಿ ಪೀಠಕ್ಕೆ ಕರೆತರಲಾಯಿತು. ವಾದ ಪ್ರತಿವಾದದ ಬಳಿಕ ತಿಮರೋಡಿಗೆ ನ್ಯಾಯಾಂಗ ಬಂಧನ ಲಭಿಸಿದೆ. ತಿಮರೋಡಿ ವಿರುದ್ಧ ಜಾಮೀನು ರಹಿತ ಕೇಸ್ ದಾಖಲಾಗಿದ್ದು ಶನಿವಾರ ವಿಚಾರಣೆ ಮುಂದುವರಿಯಲಿದೆ.
ನ್ಯಾಯಾಲಯ ಆವರಣದಲ್ಲಿ ಸಾವಿರಾರು ಮಂದಿ ತಿಮರೋಡಿ ಬೆಂಬಲಿಗರು ಜಮಯಿಸಿದ್ದು ತಿಮರೋಡಿ ಹೊರಗೆ ಬರುತ್ತಲೇ ಜಯಕಾರ ಹಾಕಿದ್ದಾರೆ.