“ತಿಮರೋಡಿ ಹಿಂದೆ ಅರೆಸ್ಸೆಸ್ ಮುಖಂಡ ಪ್ರಭಾಕರ್ ಭಟ್!” -ವಿನಯ್ ಕುಮಾರ್ ಸೊರಕೆ

ವಿಜಯಪುರ: “ಬಂಧನಕ್ಕೊಳಗಾದ ಮಹೇಶ್ ಶೆಟ್ಟಿ ತಿಮರೋಡಿ ಯಾರು? ಈ ವ್ಯಕ್ತಿ ಯಾವ ಮೂಲದವರು? ತಿಮರೋಡಿಗೆ ಪ್ರಚೋದನೆ ಕೊಡುತ್ತಿರೋರು ಯಾರು?” ಎಂದು ಕಾಂಗ್ರೆಸ್ ಮುಖಂಡ ವಿನಯ್ ಕುಮಾರ್ ಸೊರಕೆ ಪ್ರಶ್ನೆ ಮಾಡಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಹಿರಿಯ ಅರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೆಸರನ್ನು ಉಲ್ಲೇಖಿಸಿದ ಅವರು, ಪ್ರಭಾಕರ್ ಭಟ್ ಅವರು ಒಂದು ಕಡೆ ಚಿವುಟುವುದು, ಮತ್ತೊಂದು ಕಡೆ ತೂಗುವ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡ ವಿನಯ್‌ ಕುಮಾರ್ ಸೊರಕೆ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಈ ಹೇಳಿಕೆ ನೀಡಿದ್ದು ಭಾರೀ ಕುತೂಹಲ ಕೆರಳಿಸಿದೆ. ಕರಾವಳಿ ಭಾಗದಲ್ಲಿ ಯಾವುದೇ ಧಾರ್ಮಿಕ ಉದ್ರೇಕಕಾರಿ ಘಟನೆಗಳು ನಡೆದ್ರೆ ಅಲ್ಲಿ ಸಂಘ ಪರಿವಾರದ ಪ್ರಭಾಕರ್ ಭಟ್‌ ಅವರು ಕಾಣಿಸಿಕೊಳ್ಳುತ್ತಾರೆ. ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ 400 ಕಾರ್‌ ಮೂಲಕ ಬಂದ್ರೆ ಅಲ್ಲಿ ಪ್ರಭಾಕರ್ ಭಟ್ರು ಯಾಕೆ ಇರಲಿಲ್ಲ ಎಂದು ಆರೋಪಿಸಿದ್ದಾರೆ.

error: Content is protected !!