ಮಂಗಳೂರು: ಬ್ರಹ್ಮಾವರ ಪೊಲೀಸ್ ವಶದಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಬ್ರಹ್ಮಾವರ ಠಾಣಾ ಜಾಮೀನು ಸಿಗದ ಹಿನ್ನೆಲೆಯಲ್ಲಿ ಅವರನ್ನು ಬ್ರಹ್ಮಾವರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬ್ರಹ್ಮಾವರ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಪ್ರಥಮ ದರ್ಜೆ ದಂಡಾಧಿಕಾರಿ ನ್ಯಾಯಾಲಯ ಉಡುಪಿ ಬ್ರಹ್ಮಾವರದ ನ್ಯಾಯಾಲಯ ಸಂಚಾರಿ ಪೀಠಕ್ಕೆ ಕರೆತರಲಾಗಿದ್ದು, ಬೇಲಾ ಜೈಲಾ ಎಂದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಈ ಮುಂಚೆ ಅವರನ್ನು ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರಕ್ಕೆ ಕರೆತಂದು ಆರೋಗ್ಯ ತಂದು ಆರೋಗ್ಯ ತಪಾಸಣೆ ನಡೆಸಲಾಗಿದೆ.
ಬೆಂಬಲಿಗರ ಜಮಾವಣೆ:
ತಿಮರೋಡಿ ಹೋದಲ್ಲೆಲ್ಲಾ ನೂರಾರು ಸಂಖ್ಯೆಯ ಬೆಂಬಲಿಗರು ಜಮಾವಣೆಗೊಳ್ಳುತ್ತಿದ್ದು, ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಹದ್ದಿನ ಕಣ್ಣಿಟ್ಟಿದ್ದಾರೆ. ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.