“24 ಹಿಂದೂ ಕಾರ್ಯಕರ್ತರನ್ನು ಕೊಂದಿದ್ದ ಸಿದ್ದರಾಮಯ್ಯ”
ಹರೀಶ್ ಪೂಂಜಾ ಹಳೆಯ ವಿಡಿಯೋ ವೈರಲ್ ಮಾಡಿದ ಸೌಜನ್ಯ ಹೋರಾಟಗಾರರು!
ಮಂಗಳೂರು: ಸದನದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರು 28 ಕೊಲೆ ಮಾಡಿದ್ದಾರೆ ಎಂಬುದಾಗಿ ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ ಕೊಟ್ಟಿದ್ದರೂ ಬಂಧಿಸಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸಹಿತ ಬಿಜೆಪಿ ಶಾಸಕರು ಗದ್ದಲ ಮಾಡಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವರು ತಿಮರೋಡಿ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಇದಕ್ಕೆ ತಿರುಗೇಟು ನೀಡಿದ ಸೌಜನ್ಯ ಹೋರಾಟಗಾರರು ಹಿಂದಿನ ಚುನಾವಣೆ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಆಡಿದ್ದ ಮಾತುಗಳನ್ನು ತಿಮರೋಡಿ ಉಲ್ಲೇಖ ಮಾಡಿದ್ದರು, ಸಾರ್ವಜನಿಕ ಭಾಷಣದಲ್ಲಿ ಸಿದ್ದರಾಮಯ್ಯ ಅವರು 24 ಹಿಂದೂ ಕಾರ್ಯಕರ್ತರನ್ನು ಕೊಂದಿದ್ದಾರೆ ಎಂದು ಪೂಂಜಾ ಹೇಳಿದ್ದನ್ನು ಪ್ರಶ್ನಿಸಿದ್ದರು. ಈ ಹೇಳಿಕೆಯನ್ನು ಬಿಜೆಪಿ ಗಮನಿಸದೆ ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಒತ್ತಾಯಿಸಿದೆ ಎಂದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ದಾಖಲೆಯನ್ನು ವೈರಲ್ ಮಾಡಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ ಕುರಿತು ಸದನದಲ್ಲಿ ಬಿಜೆಪಿ ಶಾಸಕರು ಭಾರೀ ಗದ್ದಲ ಮಾಡಿದ್ದು ಮುಖ್ಯಮಂತ್ರಿಯನ್ನು ಕೊಲೆಗಾರ ಎಂದು ಕರೆಯಬೇಕಾ ಎಂದು ಕೇಳಿದ್ದರು. ಈಗ ಹರೀಶ್ ಪೂಂಜಾ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಪರ ವಿರೋಧ ಚರ್ಚೆ ಹುಟ್ಟುಹಾಕಿದೆ.