ಟೀಮ್ ತುಳುನಾಡು, ಕಾರವಾರ ಇವರಿಂದ ಆಟಿಡೊಂಜಿ ದಿನದ ಕಾರ್ಯಕ್ರಮ !

ಕಾರವಾರ : ಟೀಮ್ ತುಳುನಾಡು ಕಾರವಾರ ಇವರಿಂದ ಆಟಿಡೊಂಜಿ ದಿನದ ಕಾರ್ಯಕ್ರಮವನ್ನು ಕಾರವಾರದಲ್ಲಿ ಪ್ರಥಮ ಬಾರಿಗೆ ಆಯೋಜನೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ನವ್ಯ ಇವರು ನೇರವೇರಿಸಿದರು. ಶ್ರೀಯುತ ರವೀಂದ್ರ ಬಂಗೇರ ಮೂಲ್ಕಿ ಇವರು ಆಟಿದಿನದ ವಿಶೇಷತೆ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಜಗದೀಶ್ ಹಾಗೂ ನವೀನ್ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಪೂರ್ಣ ನಿರ್ವಾಹಕರಾಗಿ ಲಿಖಿತ್ ಕಾರ್ಕಳ ಇವರು ನಿರ್ವಹಿಸಿದರು.


ಸಭಾ ಕಾರ್ಯಕ್ರಮದ ನಂತರ ಪ್ರಜ್ವಲ್ ಕುಮಾರ್ ನಾಯಕತ್ವದಲ್ಲಿ ಐಸಿರ ತಂಡದಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿತು.


ಕಾರ್ಯಕ್ರಮದ ನಂತರ ಶಿರ್ವದ ಮಹಿಳೆಯರಾದ ರೇಖಾ, ರಮ್ಯಾ, ವನಿತ ಹಾಗೂ ತಂಡದ ಕುಟುಂಬದ ಸದ್ಯಸರ ಇವರಿಂದ ತುಳುನಾಡಿನ ವಿಶೇಷ 18 ಬಗೆಯ ಖಾದ್ಯಗಳೊಂದಿಗೆ ಊಟೋಪಚಾರ ನಡೆಯಿತು. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಪ್ರಿತೇಶ್ ನೇರವೇರಿಸಿದರು ಹಾಗೂ ಟೀಂ ತುಳುನಾಡು ಕಾರವಾರ ಇದರ ಎಲ್ಲಾ ಸದಸ್ಯರು ತನು ಮನ ಧನಗಳಿಂದ ಸಹಕರಿಸಿದರು.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19

error: Content is protected !!