ಮಂಗಳೂರು: ಕಿನ್ನಿಗೋಳಿ,ಕಟೀಲು, ಪಕ್ಷಿಕೆರೆ, ನೀರುಡೆ, ನಿಡ್ಡೋಡಿ,ಕಿರೆಂ ಹಾಗೂ ಬಳ್ಕುಂಜೆ ಚರ್ಚ್ಗಳನ್ನೊಳಗೊಂಡ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಮಂಗಳೂರು ಉತ್ತರ ವಲಯದ ಪ್ರತಿಭಾ ಪುರಾಸ್ಕಾರ ಕಾರ್ಯಾಕ್ರಮ ಶುಕ್ರವಾರ(ಆ. 15) ರಂದು ಕಿನ್ನಿಗೋಳಿ ಚರ್ಚ್ ಸಭಾಭವನದಲ್ಲಿ ನೆರವೇರಿತು.
ವಲಯದ ಏಳು ಚರ್ಚ್ ಗಳ S.S.L.C ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ, M.B.B.S, C.A. ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ Rank ಹಾಗೂ ಬಂಗಾರದ ಪದಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅದೇ ರೀತಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯದ ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಮಿರಾಂದರವರು ವಹಿಸಿದ್ದರು. ಆಧ್ಯಾತ್ಮಿಕ ನಿರ್ದೇಶಕರಾದ ಅತೀ ವಂದನೀಯ ಓಸ್ವಾಲ್ಡ್ ಮೊಂತೆರೊರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕು . ಮಿಶೆಲ್ ಕ್ವೀನಿ ಡಿ ಕೋಸ್ತ IRS ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಸಿವಿಲ್ ಸೇವಾ ಪರೀಕ್ಷೆಗಳ ಮಹತ್ವ ಹಾಗೂ ಸೂಕ್ತ ಮಾರ್ಗದರ್ಶನ ನೀಡಿದರು ಹಾಗೂ ಶುಭ ಹಾರೈಸಿದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
ಅತಿಥಿಗಳಾಗಿ ಕಿನ್ನಿಗೋಳಿ ಚರ್ಚ್ ನ ಧರ್ಮ ಗುರುಗಳು ವಂದನೀಯ ಜೋಕಿಮ್ ಫೆರ್ನಾಂಡಿಸ್, ಕಿನ್ನಿಗೋಳಿ ಪಾಲನಾ ಸಮಿತಿ ಉಪಾಧ್ಯಕ್ಷರಾದ ವಿಲಿಯಂ ಡಿ ಸೋಜ, ಕಾರ್ಯದರ್ಶಿ ಮೈಕೆಲ್ ಪಿಂಟೊ, ವಲಯದ ನಿಕಟ ಪೂರ್ವ ಅಧ್ಯಕ್ಷರಾದ ಕು.ಮೆಲ್ರೀಡ ಜೇನ್ ರೊಡ್ರಿಗಸ್ ಕೋಶಾಧಿಕಾರಿ ಜೋನ್ ಕಿಶೋರ್ ಡಿ ಸೋಜ ಉಪಸ್ಥಿತರಿದ್ದರು.
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
ವಲಯಾಧ್ಯಕ್ಷರಾದ ಶ್ರೀಯುತ ಸ್ಟ್ಯಾನಿ ಮಿರಾಂದ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಮತಿ ಗ್ರೆಟ್ಟಾ ಫೆರ್ನಾಡಿಸ್ ವಂದಿಸಿದರು.ಶ್ರೀಮತಿ ಶಾಂತಿ ಮೇಬಲ್ ಮಾರ್ಟಿಸ್ ಕಾರ್ಯಾಕ್ರಮ ನಿರೂಪಿಸಿದರು.