ಉಡುಪಿ: ಕುಂದಾಪುರದ 57 ವರ್ಷದ ವಿಲ್ಮಾ ಕ್ರಾಸ್ತಾ ಕಾರ್ವಾಲ್ಹೋ ಆಗಸ್ಟ್ 15 ಸ್ವಾತಂತ್ರ್ಯ ದಿನದಂದು, ವಿಶ್ವದ ಅತ್ಯಂತ ಸವಾಲಿನ ಭೂಪ್ರದೇಶಗಳಲ್ಲಿ ಒಂದಾದ ಸಿಯಾಚಿನ್ ಹಿಮನದಿಯಲ್ಲಿ ಚೀನಾ ಗಡಿಯ ಬಳಿ ರಾಷ್ಟ್ರಧ್ವಜವನ್ನು ಹಾರಿಸಲು ಎಂಟು ದಿನಗಳಲ್ಲಿ 1,300 ಕಿಲೋಮೀಟರ್ ಸವಾರಿ ಮಾಡಿ ಸಾಧನೆ ಮಾಡಿದ್ದಾರೆ.
2023 ರಲ್ಲಿ ವಿಶ್ವದ ಅತೀ ಎತ್ತರದ ಪ್ರದೇಶವಾದ ಪಾಸ್ ಉಮ್ಲಿಂಗ್ ಗೆ ತನ್ನ ಮಗಳು ಚೆರಿಶ್ ಕರ್ವಾಲೋ ಜೊತೆ ಧೈರ್ಯಶಾಲಿಯಾಗಿ ಬೈಕ್ ಸವಾರಿ ಮೂಲಕ ಗಮನ ಸೆಳೆದ ನಂತರ, ವಿಲ್ಮಾ ಈಗ ಮತ್ತೊಂದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಈ ಯಾತ್ರೆಯು ಆರು ಸದಸ್ಯರ ತಂಡವಾಗಿದ್ದು, ಅವರ ಮಾರ್ಗವು ಲೇಹ್‌ನಿಂದ ರಮಣೀಯವಾದ ಝನ್ಸ್ಕರ್ ಕಣಿವೆಯ ಮೂಲಕ ಹಾದು ಹೋಗಿ ಕಾರ್ಗಿಲ್ ಬಳಿಯ ಗುರ್ಖಾನ್ ಕಣಿವೆಯ ಕಡೆಗೆ ಸಾಗಿ ಅಂತಿಮವಾಗಿ ಸಿಯಾಚಿನ್ ತಲುಪಿದರು. ಒಂದು ಹಂತದಲ್ಲಿ, ಕೇವಲ 60 ಕಿಮೀ ಉಳಿದಿರುವಾಗ, ಅವರು ನಿಲ್ಲಿಸುವ ಬಗ್ಗೆ ಯೋಜನೆ ಹಾಕಿಕೊಂಡರಂತೆ , ಆದರೆ ಸಂಪೂರ್ಣ ದೃಢ ನಿಶ್ಚಯದೊಂದಿಗೆ ಅವರು ಸವಾರಿಯನ್ನು ಮುಂದುವರಿಸಿದರು.
ವಿಲ್ಮಾ ಪ್ರಯಾಣದ ಬಗ್ಗೆ ಮಾತನಾಡುತ್ತಾ, ಸಿಯಾಚಿನ್ ಯಾತ್ರೆ ಇದುವರೆಗಿನ ಪ್ರಯಾಣದಲ್ಲಿ ತನ್ನ ಕಠಿಣವಾದ ಸವಾರಿ ಎಂದು ಅವರು ಹೇಳಿದರು. ಧ್ವಜ ಹಾರಿಸಲು ನನ್ನ ಕನಸು ಆಗಿತ್ತು . ನಾನು ಯೋಜಿಸಿದಂತೆ ಬೆಳಿಗ್ಗೆ ತಲುಪಲು ಸಾಧ್ಯವಾಗದಿದ್ದರೂ, ನಾನು ಅಂತಿಮವಾಗಿ ಮಧ್ಯಾಹ್ನದ ಹೊತ್ತಿಗೆ ಸ್ಥಳವನ್ನು ತಲುಪಿದೆ ಮತ್ತು ಸವಾರಿಯನ್ನು ಪೂರ್ಣಗೊಳಿಸಿದ ಕುರಿತು ಸಂತೋಷವನ್ನು ವ್ಯಕ್ತಪಡಿಸಿದರು.
ಯೋಗ, ಪ್ರಾಣಾಯಾಮ ಮತ್ತು ಧ್ಯಾನದಲ್ಲಿ ಬಲವಾದ ನಂಬಿಕೆಯುಳ್ಳ ವಿಲ್ಮಾ, ತನ್ನ ಸಹಿಷ್ಣುತೆ ಮತ್ತು ಸಾಹಸ ಮನೋಭಾವ ಶಿಸ್ತುಬದ್ಧ ಜೀವನಶೈಲಿಗೆ ಕಾರಣವೆಂದು ಹೇಳುತ್ತಾರೆ. ಅವರ ಸವಾರಿಯ ಉತ್ಸಾಹವು ಅನೇಕರಿಗೆ ಸ್ಫೂರ್ತಿ ನೀಡುತ್ತಲೇ ಇದೆ, ಕನಸುಗಳನ್ನು ಬೆನ್ನಟ್ಟುವಲ್ಲಿ ವಯಸ್ಸು ಎಂದಿಗೂ ಮಿತಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19