ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಜನಪ್ರಿಯವಾಗಿರುವ ಕಾಶಿಶ್ ಕಪೂರ್ ಇದೀಗ ಸಂದರ್ಶನವೊಂದರಲ್ಲಿ ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ. ಓರ್ವ ಕ್ರಿಕೆಟಿಗ ಕುರಿತಂತೆ ಕಾಶಿಶ್ ಗಂಭೀರ ಆರೋಪ ಮಾಡಿದ್ದಾರೆ.
18ನೇ ಸೀಸನ್ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಅಭಿಮಾನಿಗಳ ಮನಗೆದ್ದಿದ್ದ ಮಾಡೆಲ್ ಕಾಶಿಶ್ ಕಪೂರ್, ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಹಲವು ವಿಚಾರಗಳ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ.
‘ಫಿಲ್ಮಿಗ್ಯಾನ್ ವೈರಲ್’ ಎನ್ನುವ ಯೂಟ್ಯೂಟ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಕಾಶಿಶ್ ಕಪೂರ್ ಆಡಿದ ಒಂದು ಮಾತು ಅಭಿಮಾನಿ ವಲಯದಲ್ಲಿ ಸಾಕಷ್ಟು ಸಂಚಲನವನ್ನೇ ಮೂಡಿಸಿದೆ.
ನಿಮಗೆ ಯಾವತ್ತಾದರೂ ಅಸುರಕ್ಷತೆಯ ಭಾವನೆ ಮೂಡಿತ್ತಾ? ಎಂದಾದರೂ ನೀವು ಭಯವಾಗುವಂತಹ ವ್ಯಕ್ತಿಯನ್ನು ಎದುರಿಸಿದ್ದೀರಾ ಎನ್ನುವ ಪ್ರಶ್ನೆಗೆ ಕಾಶಿಶ್ ಕಪೂರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಓರ್ವ ಫೇಮಸ್ ಕ್ರಿಕೆಟಿಗ ನನ್ನ ಬಳಿ ಬಂದು, ನೀನೊಬ್ಬಳೇ ನನ್ನನ್ನು ಭೇಟಿಯಾಗು ಎಂದು ಹೇಳಿದ್ದ. ಅದನ್ನು ಕೇಳಿ ನನಗೆ ಆಗ ನಿಜಕ್ಕೂ ಭಯವಾಗಿತ್ತು ಎಂದು ಕಾಶಿಶ್ ಕಪೂರ್ ಹೇಳಿದ್ದಾರೆ.
ಆ ಕ್ರಿಕೆಟಿಗನ ಮಾತನ್ನು ನಾನು ಸಾರಾಸಗಟಾಗಿ ನಿರಾಕರಿಸಿದೆ. ಆತ ಕ್ರಿಕೆಟಿಗನಾಗಿರುಬಹುದು. ಆದರೆ ನನ್ನ ದೃಷ್ಟಿಯಲ್ಲಿ ಆತ ಎಲ್ಲರಂತೆ ಒಬ್ಬ ವ್ಯಕ್ತಿಯಷ್ಟೇ. ಆತ ಕ್ರಿಕೆಟಿಗನಾದ ಕಾರಣಕ್ಕೆ ನಾನು ಆತನ ಮೇಲೆ ಇಂಪ್ರೆಸ್ ಆಗುವುದಿಲ್ಲ ಎಂದು ಕಾಶಿಶ್ ಹೇಳಿದ್ದಾರೆ.
ಅಷ್ಟಕ್ಕೂ ಯಾರು ಆ ಫೇಮಸ್ ಕ್ರಿಕೆಟಿಗ ಎನ್ನುವುದನ್ನು ಕಾಶಿಶ್ ಬಾಯ್ಬಿಟ್ಟಿಲ್ಲ. ಇದಷ್ಟೇ ಅಲ್ಲ, ಯಾರು ಆ ಕ್ರಿಕೆಟಿಗ ಎನ್ನುವ ಸುಳಿವನ್ನು ನಾನು ನಿಮಗೆ ನೀಡುವುದಿಲ್ಲ ಎಂದು ಕಾಶಿಶ್ ಹೇಳಿದ್ದಾರೆ.