ಬಿಗ್‌ಬಾಸ್‌- 12 ಸೆಪ್ಟೆಂಬರ್‌ಗೆ? ಸಂಭಾವ್ಯ ಅಭ್ಯರ್ಥಿಗಳು ಪಟ್ಟಿ ರಿವೀಲ್‌?

ಬೆಂಗಳೂರು: ಕರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಯಾವಾಗ ಆರಂಭವಾಗುತ್ತದೆ ಎಂದು ವೀಕ್ಷಕರು ಕಾಯುತ್ತಿರುರುವಾಗಲೇ ವಾಹಿನಿ ಲೋಗೋ ರಿಲೀಸ್‌ ಮಾಡಿದ್ದು, ಕುತೂಹಲವನ್ನು ಹೆಚ್ಚಿಸಿದೆ. ಕಾರ್ಯಕ್ರಮ ಆರಂಭದ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಮೂಲಗಳ ಪ್ರಕಾರ ಸೆಪ್ಟೆಂಬರ್‌ನಲ್ಲಿ ಆರಂಭವಾಗುವುದ ಪಕ್ಕಾ ಎನ್ನಲಾಗಿದೆ.

ಸಂಭಾವ್ಯ ಸ್ಪರ್ಧಿಗಳು
ಸದ್ಯ ಸ್ಪರ್ಧಿಗಳಾಗಿ ಯಾರೆಲ್ಲ ಇರುತ್ತಾರೆ ಎನ್ನುವ ಬಗ್ಗೆ ಇನ್ನೂ ಮಾಹಿತಿ ಹೊರ ಬಿದ್ದಿಲ್ಲ. ಎಂದಿನಂತೆ ಕಲಾವಿದರು, ಹೆಚ್ಚು ಚಾಲ್ತಿಯಲ್ಲಿರುವವರನ್ನೇ ಈ ಬಾರಿಯೂ ಆಯ್ಕೆ ಮಾಡುವ ಸಾಧ್ಯತೆ ಇದೆ. ಅದಾಗ್ಯೂ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಸೋಶಿಯಲ್‌ ಮೀಡಿಯಾದಲ್ಲಿ ಹರದಾಡುತ್ತಿದೆ.

Payal Chengappa Photos
ಪಾಯಲ್‌ ಚಂಗಪ್ಪ

ಕಿರುತೆರೆ ಕಲಾವಿದರಾದ ವಿಜಯ್ ಸೂರ್ಯ, ಧನುಷ್‌, ದೀಪಿಕಾ ಗೌಡ, ಪಾಯಲ್‌ ಚೆಂಗಪ್ಪ, ಬಾಳು ಬೆಳಗುಂದಿ, ಅಮೃತಾ ರಾಮಮೂರ್ತಿ, ಸ್ವಾತಿ, ದಿವ್ಯಾ ವಸಂತ, ನಿರೂಪಕಿ ಜಾಹ್ನವಿ ಕಾರ್ತಿಕ್‌, ಶ್ವೇತಾ ಆರ್‌. ಪ್ರಸಾದ್‌, ಸೂರಜ್‌, ಕುರಿ ಸುನೀಲ್‌ ಮತ್ತಿತರರು ಈ ಬಾರಿಯ ಬಿಗ್‌ ಬಾಸ್‌ನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಅದಾಗ್ಯೂ ಅಧಿಕೃತ ಪ್ರಕಟಣೆಯನ್ನು ವಾಹಿನಿ ಇನ್ನೂ ಘೋಷಿಸಿಲ್ಲ. ಎಂದಿನಂತೆ ಶೋ ಆರಂಭದ ದಿನವೇ ಎಲ್ಲ ಸ್ಪರ್ಧಿಗಳ ವಿವರ ರಿವೀಲ್‌ ಆಗುವ ಸಾಧ್ಯತೆ ಇದೆ.

No photo description available.
ಅಮೃತಾ ರಾಮಮೂರ್ತಿ

ʼʼಕಾದಿದ್ದು ಸಾಕು! ಬಿಗ್ ಬಾಸ್ ಈಸ್ ಬ್ಯಾಕ್! ಆದ್ರೆ… ಈ ಸಲ ಕಿಚ್ಚು ಮಾತ್ರ ಹೆಚ್ಚು!ʼʼ ಎಂಬ ಕ್ಯಾಪ್ಶನ್‌ ನೀಡಿ ಇನ್‌ಸ್ಟಾಗ್ರಾಮ್‌ನಲ್ಲಿ ಲೋಗೋವನ್ನು ಬಿಡುಗಡೆ ಮಾಡಲಾಗಿದೆ. ಆ ಮೂಲಕ ಈ ಬಾರಿಯ ಸೀಸನ್‌ ಇನ್ನಷ್ಟು ವಿಶೇಷವಾಗಿರಲಿದೆ ಎನ್ನುವ ಸೂಚನೆ ಸಿಕ್ಕಿದೆ. ಹೀಗಾಗಿ ನಿರೀಕ್ಷೆಯೂ ಹೆಚ್ಚಾಗಿದೆ.

jhanvi
ನಿರೂಪಕಿ ಜಾಹ್ನವಿ

ಕಳೆದ 11 ಸೀಸನ್‌ಗಳ ನಿರೂಪಣೆಯ ಹೊಣೆ ಹೊತ್ತವರು ಕಿಚ್ಚ ಸುದೀಪ್‌. ಸೀಸನ್‌ 11 ಅಂತ್ಯವಾದ ಬೆನ್ನಲ್ಲೇ ಅವರು ನಿರೂಪಣೆಯಿಂದ ಬ್ರೇಕ್‌ ಪಡೆಯುವುದಾಗಿ ಘೋಷಿಸಿದ್ದರು. ಸಿನಿಮಾಕ್ಕೆ ಹೆಚ್ಚಿನ ಗಮನ ಹರಿಸಲು ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದರು. ಇದಕ್ಕೆ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಕೊನೆಗೂ ವಾಹಿನಿ ಮನವೊಲಿಸಿ ಸುದೀಪ್‌ ಅವರನ್ನು ಶೋಗೆ ಮರಳಿ ಕರೆ ತಂದಿದೆ. ಸುದ್ದಿಗೋಷ್ಠಿ ನಡೆಸಿ ಸ್ವತಃ ಸುದೀಪ್‌ ತಾವೇ ನಿರೂಪಕರಾಗಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದರು.

ಶ್ವೇತಾ ಆರ್‌. ಪ್ರಸಾದ್‌

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!