ಬಜ್ಪೆ: ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕರಂಬಾರಿನಲ್ಲಿ 79 ನೇ ಸ್ವಾತಂತ್ರೋತ್ಸವ ವಿಜೃಂಭಣೆಯಿಂದ ನಡೆಸಲಾಯಿತು.
ಧ್ವಜಾರೋಹಣವನ್ನುಎಸ್‌ಡಿಎಂಸಿ( SDMC) ಅಧ್ಯಕ್ಷರಾದ ಗುಣಪಾಲ್ ದೇವಾಡಿಗ ನೆರವೇರಿಸಿದರು. ಈ ಸಂದರ್ಭದಲ್ಲಿ ದಿವಂಗತ ರಾಮ ದೇವಾಡಿಗ ಸ್ಮರಣಾರ್ಥ ನೂತನ ಧ್ವಜಸ್ತಂಭವನ್ನು ಅವರ ಧರ್ಮಪತ್ನಿ ಸೀತಾ ದೇವಾಡಿಗ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ, ಕೋರ್ದಬ್ಬು ದೈವಸ್ಥಾನ ಕರಂಬಾರಿನ ಅಧ್ಯಕ್ಷರಾದ ಜಗನಾಥ್ ಸಾಲ್ಯಾನ್, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಲಕ್ಷ್ಮಣ್ ಬಂಗೇರ, ನಮ್ಮ ಕ್ಲಿನಿಕ್ ಮಳವೂರಿನ ವೈದ್ಯಾಧಿಕಾರಿ ಡಾ|ಸಮೀಕ್ಷಾ ಡಿ.ಪಿ. , ನಮ್ಮ ಜವನೆರ್ ಕರಂಬಾರು ಅಧ್ಯಕ್ಷರಾದ ರಮೇಶ್ ಸುವರ್ಣ, ಶ್ರೀ ದೇವಿ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್ ಅಧ್ಯಕ್ಷರಾದ ರವಿ ಶೆಟ್ಟಿ, ಓಂಕಾರ್ ಫ್ರೆಂಡ್ಸ್ ಕ್ಲಬ್ ಕೆಂಜಾರು ಕರಂಬಾರು ಅಧ್ಯಕ್ಷರಾದ ಮನೋಜ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ರಾಕೇಶ್ ಕುಂದರ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಕೋಶಾಧಿಕಾರಿ ವಿನೋದ್ ಅರ್ಬಿ, ಖಜಾಂಚಿ ಮಿಥುನ್ ಪೂಜಾರಿ, ಶಾಲಾ SDMC ಉಪಾಧ್ಯಕ್ಷರಾದ ಲಾವಣ್ಯ, ಮಾಜಿ SDMC ಅಧ್ಯಕ್ಷರಾದ ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಉಷಾ ಕಿರಣ ಸ್ವಾಗತಿಸಿದರು, ಗೀತಾ ಟೀಚರ್ ನಿರೂಪಿಸಿ, ವಂದಿಸಿದರು.