ಕಿನ್ನಿಗೋಳಿ: ಶ್ವಾನಗಳಿಗೆ ರೇಬಿಸ್ ನಿರೋಧಕ ಲಸಿಕೆ, ಕ್ಯಾನ್ಸರ್ ಪೀಡಿತ ವ್ಯಕ್ತಿಯೋರ್ವರಿಗೆ ಧನಸಹಾಯ ನೀಡುವ ಮೂಲಕ ಕಿನ್ನಿಗೋಳಿಯ ʻಜೆಬಿ ಪ್ರೆಂಡ್ಸ್ʼ ಸದಸ್ಯರು ವಿಶಿಷ್ಠ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಶ್ರೀ ಆದಿಶಕ್ತಿ ನಾಗಕನ್ನಿಕ ಕ್ಷೇತ್ರ ಬಾಬಕೋಡಿ ಪುನರೂರಿನಲ್ಲಿ ಜೆಬಿ ಫ್ರೆಂಡ್ಸ್ ಸದಸ್ಯರು ಸ್ವಾತಂತ್ರ್ಯ ದಿನಾಚರಿಸಿದರು. ಕಟೀಲಿನ ಅಜರು ನಿವಾಸಿಯೋರ್ವರು ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ವಿಚಾರವನ್ನು ಸದಸ್ಯರು ಕುವೈಟ್ ಉದ್ಯಮಿ ಶಂಕರ್ ಶೆಟ್ಟಿ ಇವರಲ್ಲಿ ತಿಳಿಸಿದರು. ಶಂಕರ್ ಶೆಟ್ಟಿ ತಕ್ಷಣ ತಕ್ಷಣ ಧನಸಹಾಯ ನೀಡುವ ಮೂಲಕ ಕ್ಯಾನ್ಸರ್ ಪೀಡಿತನ ಕುಂಟುಬಕ್ಕೆ ನೆರವಾದರು.
ಅದೇ ರೀತಿ ಪಶು ವೈದ್ಯಕೀಯ ಇಲಾಖೆ, ಪಶು ಆಸ್ಪತ್ರೆ ಕಿನ್ನಿಗೋಳಿ ಹಾಗೂ, ಕ್ಲಬ್ಬಿನ ವತಿಯಿಂದ ಸುಮಾರು 20 ಶ್ವಾನಗಳಿಗೆ ಉಚಿತ ರಾಬಿಸ್ ಲಸಿಕಾ ಕಾರ್ಯಕ್ರಮ ನಡೆಸಲಾಯಿತು. ನಡೆಯಿತು. ಪಶುವೈದ್ಯಾಧಿಕಾರಿ ಗ್ರೀಷ್ಮರಾವ್, ಉದ್ಯೋಗಿ ಮಮತಾ. ಉಪಸ್ಥಿತರಿದ್ದರು. ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಪುನರೂರು ಸ್ವಾಗತಿಸಿದರು ಸದಸ್ಯರಾದ ಗೋಪಾಲ್ ಜೋಡುಬೈಲು, ಸುಧಾಕರ್ ಪದ್ಮನೂರು ಕ್ಷೇತ್ರದ ಮುಖ್ಯಸ್ಥರಾದಂತಹ ವಸಂತಿ ಸೇಸಪ್ಪ ಮಡಿವಾಳ, ಶೇಸಪ್ಪ ಮಡಿವಾಳ, ಕಾಂತಿ ಶೆಟ್ಟಿ ಪುನರೂರು ಉಪಸ್ಥಿತರಿದ್ದರು.