ʻಧರ್ಮಸ್ಥಳ ಕೇಸ್:‌ ಮುಸುಕುಧಾರಿ ಮತಾಂತರಗೊಂಡವ, ಸುಜಾತಾ ಭಟ್‌ಗೆ ಮಗಳೇ ಇಲ್ಲʼ

ಬೆಂಗಳೂರು: ಧರ್ಮಸ್ಥಳದಲ್ಲಿ ನೆಲ ಅಗೆಯಲು ಹೇಳುತ್ತಿರುವ ಮುಸುಕುಧಾರಿ ಹಿಂದೂ ಧರ್ಮದಿಂದ ಮತಾಂತರಗೊಂಡವನಾಗಿದದ್ದು, ಅವನು ಕೊಳ್ಳೇಗಾಲ ಮೂಲದವನು, ಮಗಳು ಅಹಪರಣಕ್ಕೀಡಾಗಿದ್ದಾಳೆ ಎಂದು ಹೇಳುವ ಸುಜಾತಾ ಭಟ್‌ಗೆ ಮಗಳೇ ಇಲ್ಲ ಎಂಬ ಬಾಂಬನ್ನು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಸಿಡಿಸಿದ್ದಾರೆ.

ವಿಧಾನಸಭೆಯಲ್ಲೇ ವಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿಕೆ ನೀಡಿ, ಮುಸುಕುಧಾರಿ ಕೊಳ್ಳೇಗಾಲ ಮೂಲದ ಈ ವ್ಯಕ್ತಿ ಹಿಂದೂ ಧರ್ಮದಿಂದ ಮತಾಂತರಗೊಂಡವ. ಈತನನ್ನು ಮುಂದಿಟ್ಟುಕೊಂಡು ಹೂಡಿರುವ ಷಡ್ಯಂತ್ರವನ್ನು ಬಯಲು ಮಾಡಲು ಎನ್‌ಐಎ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಮಾಸ್ಕ್ ಮ್ಯಾನ್‌ ಹುಚ್ಚ ಎಂದು ಹೇಳುವ ಬದಲು, ಮೊದಲೇ ತನಿಖೆ ಮಾಡಬೇಕು. ಈವರೆಗೆ ಆತನ ಮಂಪರು ಪರೀಕ್ಷೆ ಮಾಡಿಲ್ಲ. ಇದುವರೆಗೆ ಒಂದು ಕೋಟಿ ರೂ.ಗೂ ಅಧಿಕ ಖರ್ಚಾಗಿದೆ. ಹಿಟಾಚಿ, ಜೆಸಿಬಿಗಳನ್ನು ಬಳಸುತ್ತಿದ್ದಾರೆ. ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ. ಇದು ಪ್ರಾಯೋಜಿತವಾದ ಕೆಲಸವಾಗಿದೆ. ಸಚಿವ ಪರಮೇಶ್ವರ ಅವರೇ, ನಿಮಗೆ ಈ ಮುಸುಕುಧಾರಿಯ ಹೆಸರು ಗೊತ್ತಿದೆಯೇ? ಜನ ಅವನನ್ನು ಚಿನ್ನಯ್ಯ ಎಂದು ಕರೆಯುತ್ತಿದ್ದಾರೆ. ಕೊಳ್ಳೇಗಾಲ ಮೂಲದ ಈ ವ್ಯಕ್ತಿ ಮತಾಂತರಗೊಂಡಿದ್ದು, ಈ ಷಡ್ಯಂತ್ರದ ತಂಡಕ್ಕೆ ವಿದೇಶದಿಂದ ಹಣ ಬಂದಿರುವ ಅನುಮಾನವಿದೆ ಎಂದು ಗಂಭೀರ ಆರೋಪ ಮಾಡಿದರು.

ಸೌಜನ್ಯಾ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯ ಕೊಡಿಸುವುದಾದರೆ ನಾವೆಲ್ಲರೂ ಬೆಂಬಲ ನೀಡುತ್ತೇವೆ. ಆದರೆ ಆ ನೆಪದಲ್ಲಿ ಮಂಜುನಾಥ ಸ್ವಾಮಿಗೆ ಅಪಮಾನ ಮಾಡಲಾಗುತ್ತಿದೆ. ಈ ಹಿಂದೆ ತಿರುಪತಿ ಯನ್ನು ಮುಳುಗಿಸಲು ಮುಂದಾಗಿದ್ದರು. ಅನಂತರ ಶಬರಿಮಲೆ, ಶನಿಸಿಂಗಾಪುರ ಕ್ಷೇತ್ರಗಳನ್ನು ಹಾಳು ಮಾಡಲು ಯತ್ನಿಸಿದರು ಎಂದರು.

ಸುಜಾತಾ ಭಟ್‌ ಎಂಬವರು ಈಗ ಬಂದು, ಪುತ್ರಿ ಅನನ್ಯಾ ಅಪಹರಣ ಆಗಿದ್ದಾಳೆ ಎಂದು ದೂರು ನೀಡಿದ್ದಾರೆ. ಅವರ ಮನೆಯವರು ಸುಜಾತಾ ಭಟ್‌ಗೆ ಮಗಳೇ ಇಲ್ಲ ಎಂದು ಹೇಳಿದ್ದರು. ಜತೆಗೆ ಅನನ್ಯಾ ಎಂಬಿಬಿಎಸ್‌ ವಿದ್ಯಾರ್ಥಿಯೇ ಅಲ್ಲ ಎನ್ನಲಾಗಿದೆ. ಪೊಲೀಸರಿಗೆ ಇಂತಹ ನಿರ್ದೇಶನವನ್ನು ಯಾರು ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!