ಸುರತ್ಕಲ್ ಭಾಗದ ಚಿನ್ನಾಭರಣ ಗ್ರಾಹಕರಿಗೆ ಸಿಹಿ ಸುದ್ದಿ! ಆ.15ರಿಂದ ವಫಾ ಜ್ಯುವೆಲ್ಲರಿಯಿಂದ ಆಫರ್‌ಗಳ ಸುರಿಮಳೆ!!

ಸುರತ್ಕಲ್: ‌ ಸುರತ್ಕಲ್ ಭಾಗದ ಚಿನ್ನಾಭರಣ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಆಗಸ್ಟ್‌ 15ರಿಂದ ವಫಾ ಜ್ಯುವೆಲ್ಲರಿಯಿಂದ ಆಫರ್‌ಗಳ ಸುರಿಮಳೆಯನ್ನೇ ಘೋಷಿಸಿದೆ. ಇದೀಗ ಸುರತ್ಕಲ್‌ನ ಕೃಷ್ಣಾಪುರದಲ್ಲಿ ಹೊಸದಾಗಿ ಚಿನ್ನದ ಮಳಿಗೆ ವಫಾ ಗೋಲ್ಡ್ ಆಂಡ್ ಡೈಮಂಡ್ಸ್‌ ಆರಂಭಗೊಂಡಿದ್ದು, ಆಗಸ್ಟ್ 15ರ ಸ್ವಾತಂತ್ರ್ಯ ದಿನದ ಸಂಭ್ರಮದಂದು ಸಂಜೆ 4.00 ಗಂಟೆಗೆ ಸಂಭ್ರಮದ ಶುಭಾರಂಭ ನಡೆಯಲಿದೆ ಎಂದು ಮಾಲಕ ಅಬ್ದುಲ್ ವಹ್ಹಾಬ್ ಕುಳಾಯಿ ಹೇಳಿದರು.

ಸುರತ್ಕಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತಾಡಿದ ಮಾಲಕ ಅಬ್ದುಲ್ ವಹ್ಹಾಬ್ ಕುಳಾಯಿ, ಬೈಕಂಪಾಡಿಯ ಅಂಗರಗುಂಡಿಯಲ್ಲಿ ವಫಾ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಜೂನ್‌ನಲ್ಲಿ ಜ್ಯುವೆಲ್ಲರಿ ಸ್ಥಾಪನೆಗೊಂಡಿತು. ತಮ್ಮ ವ್ಯವಹಾರದೊಂದಿಗೆ ಸಾಮಾಜಿಕ, ಶೈಕ್ಷಣಿಕ, ಕ್ರೀಡಾ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸೇವೆಯನ್ನೂ ನೀಡುತ್ತಾ ಮನೆಮಾತಾಗಿದೆ ಎಂದರು.

2024ರ ಜೂನ್‌ನಲ್ಲಿ ಕೇರಳದ ಹೊಸಂಗಡಿಯಲ್ಲಿ ಫರ್ನೀಚರ್ ನಿರ್ಮಾಣವನ್ನು ಕೈಗೆತ್ತಿಕೊಂಡಿತು. 2024ರ ಆಗಸ್ಟ್ 18ರಂದು ವಫಾ ಫರ್ನೀಚರ್ ಬಜ್ಪೆಯಲ್ಲಿ ಹೊಸ ಶೋರೂಂ ತೆರೆಯಲಾಯಿತು. ಕರ್ನಾಟಕ-ಕೇರಳದ ಗಡಿಭಾಗವಾದ ತುಮಿನಾಡುವಿನಲ್ಲಿ 2025ರ ಫೆಬ್ರವರಿ ಫರ್ನೀಚರ್ ತಯಾರಿಕಾ ಘಟಕವನ್ನು ಸ್ಥಾಪಿಸಲಾಯಿತು. ಹೊಸದಾಗಿ ಬಜ್ಜೆಯಲ್ಲಿ 2024ರ ಆಗಸ್ಟ್ 18ರಂದು ಶೋರೂಂ ತೆರೆಯಲಾಯಿತು. ಫೆಬ್ರವರಿ 24ರಂದು ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಮೂಳೂರಿನಲ್ಲಿ, ಬಳಿಕ ಕೇರಳದ ತುಮಿನಾಡುವಿನಲ್ಲೂ ಶೋರೂಂ ತೆರೆದಿದ್ದೇವೆ. ಫೆಬ್ರವರಿ 2024ರಲ್ಲಿ ಕಾಟಿಪಳ್ಳದಲ್ಲಿ ವಫಾ ಬಿಲ್ಡರ್ ಆಂಡ್ ಡೆವಲೆಪರ್ ಉದ್ಯಮವನ್ನು ಆರಂಭಿಸಿದ್ದೇವೆ ಎಂದು ಸಂಸ್ಥೆಯ ಮಾಲಕರಾದ ಅಬ್ದುಲ್ ವಹ್ಹಾಬ್ ಕುಳಾಯಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮೀಡಿಯಾ ಉಸ್ತುವಾರಿ ಜುನೈದ್, ಮೆನೇಜರ್ ಖಾದರ್, ಗೋಲ್ಡ್ ಆ್ಯಂಡ್ ಡೈಮಂಡ್ ಇನ್ಚಾರ್ಜ್ ರಾಝಿಕ್ ಉಪಸ್ಥಿತರಿದ್ದರು.

ಆಫರ್‌ಗಳು:
-ಆ.15ರಂದು ಶೋರೂಂಗೆ ಬರುವವರ ಪೈಕಿ ಇಬ್ಬರಿಗೆ ಚಿನ್ನದ ಉಂಗುರ ಪಡೆಯುವ ಅವಕಾಶ
-ಆಗಸ್ಟ್‌ 15ರಿಂದ ನವೆಂಬರ್‌ 15ರ ತನಕ ಬರುವ ಗ್ರಾಹಕರಿಗೆ ಒಂದು ಪವನ್‌ ಚಿನ್ನ ಗೆಲ್ಲುವ ಅವಕಾಶ
– ಅಡ್ವಾನ್ಸ್‌ ಗೋಲ್ಡ್‌ ಪರ್ಚೇಸ್‌ ಅಂತ ಆಫರ್‌ ಇದ್ದು, ಶೋರೋ ಉದ್ಘಾಟನೆ ದಿನ ಮಾಹಿತಿ ನೀಡಲಿದ್ದೇವೆ.
-ಸ್ವರ್ಣ ಬಂಧ ಆಫರ್‌ ಕೂಡಾ ಅದೇ ದಿನ ಉದ್ಘಾಟನೆಗೊಳ್ಳಲಿದೆ.
-ಗ್ರಾಹಕರ ಸ್ಕೀಂ ಇದ್ದು, ಇದರಲ್ಲಿ ಗ್ರಾಹಕರಿಗೆ ಮೇಕಿಂಜ್‌ ಚಾರ್ಜ್‌ ಇಲ್ಲದೆ ಚಿನ್ನ (ಝೀರೋ ಮೇಕಿಂಗ್‌ ಚಾರ್ಜ್)‌ ಕೊಡುವ ಸೌಲಭ್ಯ ಯೋಜಿಸಲಿದ್ದೇವೆ.

error: Content is protected !!