ರೆಡ್ ಹಾಟ್ ಮಿಯಾ ಖಲೀಫಾ ಈ ಬಾರಿ ದಕ್ಷಿಣ ಭಾರತ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಅಪ್ಪಳಿಸಿದೆ. ಇದನ್ನು ಕೇಳಿ ಮಿಯಾ ಅಭಿಮಾನಿಗಳು ಫಿದಾ ಆಗಿದ್ದಾರೆ.
ಹೌದು ಮಿಯಾ ಖಲೀಫಾ ಚೈಂಕ್ಸ್ 2 ಮಲಯಾಳಿ ಚಿತ್ರದಲ್ಲಿ ನಟಿಸಲಿದ್ದಾರೆ. ಹ್ಯಾಪಿ ವೆಡ್ಡಿಂಗ್ ಮತ್ತು ಚೈಂಕ್ಸ್ ನಂತಹ ಚಿತ್ರಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ಮಲಯಾಳಂ ಚಲನಚಿತ್ರ ನಿರ್ಮಾಪಕ ಒಮರ್ ಲುಲು ಅವರು ವಿಶ್ವಪ್ರಸಿದ್ಧ ಸೈಬರ್ ಸ್ಟಾರ್ ಮಿಯಾ ಖಲೀಫಾ ಅವರನ್ನು ತಮ್ಮ ಮುಂದಿನ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಇದು ಚೈಂಕ್ಸ್ ನ ಮುಂದುವರಿದ ಭಾಗ ಎಂದು ಒಮರ್ ಮಾಧ್ಯಮಗಳಿಗೆ ಬಹಿರಂಗಪಡಿಸಿದರು. ಈ ಚಿತ್ರದಲ್ಲಿ ಮಿಯಾ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗುತ್ತದೆ. ಅವರು ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಇದು ಅತಿಥಿ ಪಾತ್ರವಲ್ಲ ಎಂದು ಒಮರ್ ಹೇಳಿದರು.