ಡೆಡ್ಲೀ ಹಾರ್ಟ್‌ ಅಟ್ಯಾಕ್:‌ ಹಾಸನದಲ್ಲಿ ಮತ್ತಿಬ್ಬರು ಮಕ್ಕಳು ಸಾವು

ಹಾಸನ: ಹಾಸನದಲ್ಲಿ ಡೆಡ್ಲಿ ಹಾರ್ಟ್‌ ಅಟ್ಯಾಕ್‌ನ ಅಟ್ಟಹಾಸ ಮುಂದುವರಿದಿದ್ದು, ಈ ಬಾರಿ ಮತ್ತೆ ಇಬ್ಬರು ಮಕ್ಕಳನ್ನು ಬಲಿ ತೆಗೆದುಕೊಂಡಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಸರಗೂರು ಗ್ರಾಮದಲ್ಲಿ ಮಲಗಿದ್ದಾಗಲೇ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮೃಪಟ್ಟಿದ್ದಾಳೆ.


ನಾಗರಾಜು ಹಾಗೂ ಭಾಗ್ಯಮ್ಮ ಅವರ ಪುತ್ರಿ ಹರ್ಷಿತಾ (17) ಮೃತ ದುರ್ದೈವಿ. ರಾಮನಾಥಪುರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಹರ್ಷಿತಾ ಕಾಲೇಜು ಮುಗಿಸಿ ಸಂಜೆ 4 ಗಂಟೆಗೆ ಮನೆಗೆ ಬಂದಿದ್ದರು. ಎಂದಿನಂತೆ ಮನೆಯಲ್ಲಿ ಮಲಗಿದ್ದ ಹರ್ಷಿತಾಳನ್ನು ಸಂಜೆ 6 ಗಂಟೆಗೆ ತಾಯಿ ಎಬ್ಬಿಸಲು ಹೋದಾಗ ಮೃಪಟ್ಟಿರುವುದು ಗೊತ್ತಾಗಿದೆ. ತಕ್ಷಣವೇ ಕೊಣನೂರು ಆಸ್ಪತ್ರೆಗೆ ಕರೆತರಲಾಯಿತಾದರೂ ಮೃತ ಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.

ಇನ್ನೊಂದು ಘಟನೆಯಲ್ಲಿ ಕೊಣನೂರು ಹೋಬಳಿ ವಡವಾಣ ಹೊಸಹಳ್ಳಿ ಗ್ರಾಮದ ನಿವಾಸಿ ಸುಭಾಷ್ (20) ಅನಾರೋಗ್ಯದಿಂದ ನಿಧನರಾದರು. ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಸುಭಾಷ್‌ಗೆ ತಂದೆ, ತಾಯಿ, ಸಹೋದರ ಇದ್ದಾರೆ. ಅಂತ್ಯಕ್ರಿಯೆಯು ಮಂಗಳವಾರ ಮಧ್ಯಾಹ್ನ ಸ್ವಗ್ರಾಮ ವಡವಾಣಹೊಸಹಳ್ಳಿಯಲ್ಲಿ ನೆರವೇರಿತು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!