ಮಂಗಳೂರು: ಭಾರತ ದೇಶ 79ನೇ ಸ್ವಾತಂತ್ರ್ಯ ದಿನಾಚರಣೆಯ ಅದ್ಧೂರಿ ಆಚರಣೆಗೆ ಅಣಿಯಾಗುತ್ತಿದ್ದು, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯಂತೆ ಈ ಬಾರಿಯೂ ಪ್ರತಿ ಮನೆಗಳಲ್ಲಿ ಹರ್ ಘರ್ ತಿರಂಗ ಅಭಿಯಾನ ನಡೆಯಲಿದೆ. ಪ್ರತಿಯೊಬ್ಬ ಭಾರತೀಯರು ತಮ್ಮ ಮನೆಯಲ್ಲಿ ತಿರಂಗವನ್ನು ಹಾರಿಸಿ ನಮ್ಮ ರಾಷ್ಟ್ರದ ಸ್ವಾತಂತ್ರ್ಯದ ಆಚರಣೆಯಲ್ಲಿ ಹೆಮ್ಮೆಯಿಂದ ಪಾಲ್ಗೊಳ್ಳುವಂತೆ ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆ ಮಣೆ ಹೇಳಿದರು.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, 2022ರಿಂದ ಪ್ರತಿ ಮನೆಯಲ್ಲಿ ಹರ್ ಘರ್ ತಿರಂಗ ಅಭಿಯಾನ ಯಶಸ್ವಿಯಾಗಿ ನಡೆದಿದೆ. ಸ್ವಾತಂತ್ರ್ಯದ ದಿನದ ಅಂಗವಾಗಿ ನಾವು ಆ.10ರಿಂದ 15ರವರೆಗೆ ಪ್ರತೀ ಗ್ರಾಮ, ಪಟ್ಟಣದಲ್ಲಿ ತಿರಂಗ ಯಾತ್ರೆಯನ್ನು ಬಿಜೆಪಿ ಪ್ರಕೋಷ್ಟ, ಮೋರ್ಚಾ ವಿವಿಧ ವಿಭಾಗಗಳಲ್ಲಿ ಆಚರಿಸಿಕೊಂಡು ಬಂದಿದ್ದೇವೆ. ಹರ್‌ಘರ್ ತಿರಂಗದ ಅಂಗವಾಗಿ (ಆ.13)ಇಂದಿನಿಂದ ಆ.15ರವರೆಗೆ ರಾಷ್ಟ್ರಧ್ಜವ ಹಾರಿಸಿ, 15ರ ಸಂಜೆ 5 ಗಂಟೆಗೆ ಧ್ವಜ ಅವರೋಹಣ ನಡೆಯಲಿದೆ. ಈಗಾಲೇ ಪಕ್ಷದ ಸರಳ್, ಹರ್ ಘರ್ ತಿರಂಗ್ ಆಪ್‌ನಲ್ಲಿ ಈ ಕುರಿತ 1 ಕೋಟಿಗೂ ವಿಡಿಯೋ ಅಪ್‌ಲೋಡ್ ಆಗಿದ್ದು, ನಮ್ಮ ಅಭಿಯಾನ ಯಶಸ್ವಿಯಾಗಿರುವುದನ್ನು ಸೂಚಿಸಿದೆ ಎಂದರು.
ಆ.13ರಿಂದ 15ರವಬರೆಗೆ ಪ್ರತೀ ಮನೆಯಲ್ಲಿ ತಿರಂಗ ಹಾರಾಟಕ್ಕೆ ಸಿದ್ಧತೆ ಮಾಡಲಾಗಿದೆ. ಸ್ವಾತಂತ್ರ್ಯ ಹೋರಾಡಿದ ಮಹನೀಯರ ಪುತ್ಥಳಿಯನ್ನು ಸ್ವಚ್ಚಗೊಳಿಸಿ ಗೌರವ ಸಲ್ಲಿಸುವ ಕೆಲಸವನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲರ ನೇತೃತ್ವದಲ್ಲಿ ನಡೆದಿದೆ. ಈ ಬಾರಿಯ ಸ್ವಾತಂತ್ರ್ಯಕ್ಕೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮೆರುಗು ಕೊಟ್ಟಿದೆ. ದಿಟ್ಟ ನಾಯಕತ್ವ ಪ್ರದರ್ಶಿಸಿದ ನರೇಂದ್ರ ಮೋದಿ ಹಾಗೂ ಕೆಚ್ಚೆದೆಯಿಂದ ಹೋರಾಡಿದ ಲಕ್ಷಾಂತರ ಸೈನಿಕರಿಗೆ ಗೌರವ ಸಲ್ಲಿಸಲು ವಿಶೇಷ ಗೌರವ ಸಲ್ಲಿಸಲು ಈ ಬಾರಿಯ ಹರ್ ಘರ್ ತಿರಂಗ ಅಭಿಯಾನವನ್ನು ಸಮರ್ಪಿಸಲಾಗಿದೆ ಎಂದು ಹರಿಪ್ರಕಾಶ್ ಕೋಣೆ ಮಣೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಅರುಣ್ ಜಿ ಶೇಟ್, ಮಾಧ್ಯಮ ಸಂಚಾಲಕ ವಸಂತ್ ಪೂಜಾರಿ, ಮಾಧ್ಯಮ ವಕ್ತಾರ ರಾಜ್‌ಗೋಪಾಲ್ ರೈ ಮತ್ತಿತರರು ಉಪಸ್ಥಿತರಿದ್ದರು.