ಮಂಗಳೂರು: ದ.ಕ. ಜಿಲ್ಲಾ ಅಥ್ಲೆಟಿಕ್ ಎಸೋಸಿಯೇಶನ್ ವತಿಯಿಂದ ಆಗಸ್ಟ್ 18 ಮತ್ತು 19ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ ಕ್ರೀಡಾಕೂಟವು ಜರಗಲಿರುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಬಾಲಕ- ಬಾಲಕಿಯರ ಸ್ಪರ್ಧೆಯು 12, 14, 16 ಮತ್ತು 18 ವಯೋಮಿತಿಯಲ್ಲಿ ಜರಗಲಿರುವುದು. 500ಕ್ಕಿಂತಲೂ ಹೆಚ್ಚು ಕ್ರೀಡಾಪಟುಗಳು ಈ ಕೂಟದಲ್ಲಿ ಭಾಗವಹಿಸಲಿರುವರು. ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಆ 18ರಂದು ಪೂರ್ವಾಹ್ನ 3.30 ಗಂಟೆಗೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ಉಡುಪಿಯಲ್ಲಿ ನಡೆಯಲಿರುವ ರಾಜ್ಯ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಗುವುದು. ಈ ಕ್ರೀಡಾಕೂಟದ ಪ್ರಾಯೋಜಕತ್ವವನ್ನು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಮತ್ತು ಎಂ.ಆರ್.ಪಿ.ಎಲ್. ನೀಡಿದೆ ಎಂದು ಆಯೋಜಕರು ವಿವರಿಸಿದರು.