ಮಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸವಣೂರು ನಿವಾಸಿ ಶಿವಕುಮಾರ್@ಶಿವು, ಸಯ್ಯದ್ ಕಲೀo @ ಕಲ್ಲು ಮಾಮು ಹಾಗೂ ಕಡಬ ರಾಮಕುಂಜ ನಿವಾಸಿ ಯೂಸೂಫ್ (32) ಬಂಧಿತ ಆರೋಪಿಗಳು.
ಶಿವು: ಪುತ್ತೂರು ನಗರ ಠಾಣಾ ಅಕ್ರ 69/2023 ಕಲ:379 ಐ.ಪಿ.ಸಿ ಪ್ರಕರಣದಲ್ಲಿ 9 ಬಾರಿ ವಾರಂಟ್ ಜಾರಿಯಾಗಿದ್ದರೂ, ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದ ಹಾವೇರಿ, ಸವಣೂರು ನಿವಾಸಿ ಶಿವಕುಮಾರ್@ಶಿವು ಎಂಬಾತ ತಲೆಮರೆಸಿಕೊಂಡಿದ್ದ. ಈತನನ್ನು ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡ ಹಾಗೂ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕ ಕಿರಣ್ ಜಾನ್ಸನ್ ಡಿಸೋಜಾ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಠಾಣಾ ಪಿ.ಎಸ್.ಐ ಕೌಶಿಕ್ ನೇತೃತ್ವದ, ಸಿಬ್ಬಂದಿ ಪ್ರಶಾಂತ ರೈ, ಗಣೇಶ ಎನ್, ಶ್ರೀಶೈಲ ಎಂ.ಕೆ, ಮಹಮ್ಮದ್ ಮೌಲಾನಾ ಅವರನ್ನೊಳಗೊಂಡ ವಿಶೇಷ ತಂಡವು ಆ.12ರಂದು ಬೆಂಗಳೂರಿನ ಅಬ್ಜಿಗೆರೆ ಎಂಬಲ್ಲಿ ದಸ್ತಗಿರಿ ಮಾಡಿದೆ.
ಕಲ್ಲು ಮಾಮು: ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ:14/2022, ಕಲಂ:394 ಐ.ಪಿ.ಸಿ. ಪ್ರಕರಣದಲ್ಲಿ ಆರೋಪಿಯಾಗಿ, ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಕಳೆದ 3 ವರ್ಷಗಳಿಂದ ಬೆಂಗಳೂರು, ಜಗಜೀವನ್ ರಾಮ್ ನಗರ ನಿವಾಸಿ ಸಯ್ಯದ್ ಕಲೀo @ ಕಲ್ಲು ಮಾಮು ತಲೆಮರೆಸಿಕೊಂಡಿದ್ದನು. ಈತನನ್ನು ಪುತ್ತೂರು ಉಪವಿಭಾಗದ ಉಪಾಧೀಕ್ಷಕರಾದ ಅರುಣ್ ನಾಗೇಗೌಡರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಪೊಲೀಸ್ ವೃತ ನಿರೀಕ್ಷಕರಾದ ರವಿ ಬಿ.ಎಸ್ ಹಾಗೂ ಪೊಲೀಸ್ ಉಪನಿರೀಕ್ಷರಾದ ಕೌಶಿಕ್ ನೇತೃತ್ವದಲ್ಲಿ, ಉಪ್ಪಿನಂಗಡಿ ಠಾಣೆಯ ಶಿವರಾಮ ರೈ ಮತ್ತು dysp ವಿಶೇಷ ತಂಡದ ಸಿಬ್ಬಂದಿ ಶಾಂತಕುಮಾರ್, ರವಿಕುಮಾರ್ ರಮೇಶ್ ಅವರನ್ನೊಳಗೊಂಡ ತಂಡವು ದಸ್ತಗಿರಿ ಮಾಡಿದೆ. ಈತನ ವಿರುದ್ಧ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ 4 ಪ್ರಕರಣಗಳು ದಾಖಲಾಗಿದೆ.
ಯೂಸೂಫ್: ಕಡಬ ಪೊಲೀಸ್ ಠಾಣಾ ಅ ಕ್ರ: 91/2019 ಕಲಂ: 341,323,324,504,506 R/w 34 IPC ಪ್ರಕರಣದಲ್ಲಿ ಕಡಬ ರಾಮಕುಂಜ ನಿವಾಸಿ ಯೂಸೂಫ್ (32) ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು ಈತನನ್ನು, ಕಡಬ ಠಾಣಾ ಪೊಲೀಸರು ಆ.12 ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಮಾನ್ಯ ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.