ದೇವಾಡಿಗರ ಸಂಘದಿಂದ ʻಆಟಿಡೊಂಜಿ ಐತಾರʼ: 32 ಬಗೆಯ ಆಟಿದ ಖಾದ್ಯದ ಸವಿ

ಹಳೆಯಂಗಡಿ: ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ, ದೇವಾಡಿಗ ಮಹಿಳಾ ವೇದಿಕೆ, ದೇವಾಡಿಗ ಯುವ ವೇದಿಕೆ, ದೇವಾಡಿಗ ಸೇವಾ ಟ್ರಸ್ಟ್ ಪಾವಂಜೆ ಆಶ್ರಯದಲ್ಲಿ ಪಾವಂಜೆಯ ದೇವಾಡಿಗ ಭವನದಲ್ಲಿ ಭಾನುವಾರ ಆಟಿಡೊಂಜಿ ಐತಾರ ಕಾರಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸುಮಾರು 32 ಬಗೆಯ ಆಟಿಯ ಖಾದ್ಯಗಳನ್ನು ಸಭಿಕರಿಗೆ ಬಡಿಸಲಾಯಿತು.

ಉಡುಪಿ ಲೋಕೋಪಯೋಗಿ ಇಲಾಖೆ ನಿವೃತ್ತ ಎಇಇ ಚೆನ್ನಪ್ಪ ಮೊಯ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳೂರಿನ ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಜ್ಯೋತಿ ಪ್ರಿಯಾ ಆಟಿದ ಮದಿಪು ನೀಡಿದರು. ಪಾವಂಜೆ ದೇವಾಡಿಗ ಮಹಿಳಾ ವೇದಿಕೆ ಅಧ್ಯಕ್ಷೆ ವಿಜಯಲಕ್ಷ್ಮಿ ಜನಾರ್ದನ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.

ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ ಉದ್ಘಾಟಿಸಿದರು. ಕಲ್ಮಾಡಿ ಬಗ್ಗು ಪಂಜುರ್ಲಿ ಕುಟುಂಬದ ಸುರೇಶ್ ಕೊಡವೂರು ಕಲ್ಮಾಡಿ, ಪ್ರಮುಖರಾದ ರವಿರಾಜ್, ಸಂಘದ ಕಟ್ಟಡ ಸಮಿತಿ ಕಾರ್ಯದರ್ಶಿ ಯಾದವ ದೇವಾಡಿಗ, ದೇವಾಡಿಗ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್ ತೋಕೂರು, ಉಪಾಧ್ಯಕ್ಷರಾದ ಜನಾರ್ದನ ಪಡು ಪಣಂಬೂರು, ವಿಠಲ ದೇವಾಡಿಗ ಅರಂದು ಮತ್ತಿತರ ರಿದ್ದರು. ತುಳಸಿ ಸತೀಶ್ ಸ್ವಾಗತಿಸಿದರು. ಮಂಜುಳಾ ನಿರೂಪಿಸಿದರು.ಜಯಶ್ರೀ ಯಾದವ್ ವಂದಿಸಿದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!